ನೀನೇಕೆ ಮೌನಿಯಾದೆ
ರಚನೆ : ನರಸಿಂಹ ಹೆಗಡೆ
----------------------------------
ಉಕ್ಕುವ ಭಾವನೆಗಳಿಗೆ ಬೀಗ ಹಾಕಿ ಮುಗಿಯದ ಮಾತುಗಳ ಗಂಟುಕಟ್ಟಿ ನಿಲ್ಲದ ನಾಲಿಗೆಯ ಓಟವನ್ನೇ ನಿಲ್ಲಿಸಿ ನೀನೇಕೆ ಮೌನಿಯಾದೆ. ವಾದ ವಾಗ್ವಾದಗಳಿಂದ ದೂರವಾಗಿ ಹರಟೆ ಕಟ್ಟೆಗಳಿಂದ ಮಾಯವಾಗಿ ಅಂತ್ಯವಿಲ್ಲದ ಸಂಭಾಷಣೆಗಳ ಆರಂಭವನ್ನೇ ನಿಲ್ಲಿಸಿ ಕೊನೆಯೇ ಇಲ್ಲದ ಪದಪುಂಜಗಳನ್ನೇ ಕೊನೆಗೊಳಿಸಿ ನೀನೇಕೆ ಮೌನಿಯಾದೆ. ಭೇದ ಭಾವವಿಲ್ಲದ ನಲ್ಮೆಯ ನಗುವನ್ನು ಹಂಚಿ ಪ್ರತಿಯೊಬ್ಬರ ಕಷ್ಟಕ್ಕೂ ಸಹಾಯಹಸ್ತವನ್ನು ನೀಡಿ ಎಲ್ಲರನ್ನು ನಿನ್ನವರಾಗಿಸಿಕೊಂಡು, ನಿನ್ನವರೆಲ್ಲರನ್ನು ದೂರಮಾಡಿ ನೀನೇಕೆ ಮೌನಿಯಾದೆ.
----------------------------------
ನೋಂದಣಿ ಐಡಿ : KPFS2-6468