ಅಮ್ಮನ ಅಪ್ಪುಗೆ
ರಚನೆ : ಪ್ರಿಯಾಂಕ ಜೆ
----------------------------------
ಏನು ಅರಿಯದ ವೇಳೆಯಲಿ ಕರುಳಿನ ಮಿಡಿತಕ್ಕೆ ಕಾಣುವಾ ದೇವತೆ ಅವಳು ಎಲ್ಲಾ ಅರಿತಾಗಲು ಕೊನೆಗೆ ಕಣ್ಣುಂದೆ ಕಾಣುವಾ ದೇವತೆ ಅವಳು ಎಲ್ಲಾ ನೋವಾ ತಾನುಂಡ ಸುಖದ ಸ್ವರ್ಗವ ಧಾರೆಯೆರದ ತ್ಯಾಗಮಯಿ ಅವಳು ಜಯದ ಹಿಂದೆ ಬೆನ್ನೆಲುಬಾಗಿ ನಿಂತು ಮುನ್ನುಗ್ಗಲು ಪ್ರೋತ್ಸಾಯಿದೆ ಧೈರ್ಯವಂತೆ ಅವಳು ಭಾವನೆಗಳಾ ಮರುಗುವಿಕೆಗೆ ಬೆಂಗಾವಲಾಗಿ ನಿಂತ ಭಾಗ್ಯ ದೇವತೆ ಅವಳು ಅವಳ ಮುಗ್ಧ ಮನಸಿನ ಪ್ರೀತಿಗೆ ಮಿಡಿಯುವುದು ಕಣ್ಣಲ್ಲಿ ಕಂಬನಿ ಬಿಂದುವೊಂದು ಆ ಕಂಬನಿಯಾ ಹೊರೆಸಿ ಮತ್ತೆ ಹೊಸ ಚಿಲುಮೆಯಾ ಮೂಡಿಸಲು ಬೇಕು ಅಮ್ಮನ ಅಪ್ಪುಗೆಯೊಂದು
----------------------------------
ನೋಂದಣಿ ಐಡಿ : KPFS2-6458