ಕನ್ನಡ
ರಚನೆ : ದಾದಾಖಲಂದರ್ ನೆಗಳೂರು
----------------------------------
ಕಸ್ತೂರಿ ಕನ್ನಡ ಭಾಷೆ ಭಾವನೆಗಳ ಮನದ ಭಾಷೆ ಸುಲಲಿತ ಸುಂದರ ಭಾಷೆ ಶ್ರೀಮಂತ ಸಾಹಿತ್ಯ,ಕನ್ನಡ ಭಾಷೆ. ಕನ್ನಡ ಎಂದೊಡನೆ ಮೈಮನಗಳಲ್ಲಿ ಸಂಚಲನದ ಸಿಂಚನ ಮೂಡಿಸುವ ಕನ್ನಡ ಭಾಷೆ. ಕರುನಾಡ ಕನ್ನಡಿಗರ ಹೆಮ್ಮೆ ತನು ಮನದ ಜೀವನದಿ ಅಡಿ ಮುಡಿಯ ಕಣದಲ್ಲೂ ನಾಡಿಮಿಡಿತದ ಕನ್ನಡ ಭಾಷೆ. ಶ್ರೀಗಂಧದ ನಾಡಿನಲ್ಲಿ ಪಸರಿಸುವ ಸುಗಂಧದ ಪರಿಮಳದಂತೆ ಬೆರೆತಿರುವ ಅಚ್ಚಳಿಯದ ಕನ್ನಡ ಭಾಷೆ.
----------------------------------
ನೋಂದಣಿ ಐಡಿ : KPFS2-6457