Submission 2214

ಹೇ ಪ್ರೇಯಸಿ

ರಚನೆ : ಶಿವರಾಜ್ ಜಿ ಮಡಿವಾಳರ್

----------------------------------

ಮನದ ಪುಸ್ತಕವ ತೆರೆದು ಹೋದೆ ನಿನ್ನೇಸರ ಬರೆದು ಅಳಿಸಲು ಹರಿವುದು ಹೃದಯದ ಹಾಳೆ ಬಿಟ್ಟರೆ ಸುರಿಯುವುದು ನೆನಪುಗಳ ಮಳೆ ನನ್ನೊಳಗಿದೆ ಸಾವಿರ ಮಾತು ಆಲಿಸು ನೀ ಎದುರಲಿ ಕೂತು ತಾಳೆನು ಎದೆಯೊಳಗಿನ ನೋವಿನ ಭಾರ ನೋಡಿದರು ಏಕೇ ಇರುವೆ ನೀ ದೂರ ಯಾರನ್ನೋ ಬಯಸಿತು ಆ ನಿನ್ನ ಮನಸು ನನ್ನಲ್ಲೇ ಉಳಿಯಿತು ಕಂಡಂತಹ ಕನಸು ಇರಬಹುದು ನಗುನಗುತ ನೀ ನನ್ನ ಮರೆತು ಯೋಚಿಸುವೆ ಪ್ರತಿ ಕ್ಷಣ ನಾ ನಿನ್ನ ಕುರಿತು

----------------------------------

ನೋಂದಣಿ ಐಡಿ : KPFS2-6452

150
Votes
977
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top