ಆದರ್ಶ ಬದುಕು
ರಚನೆ : ಯಲ್ಲವ್ವ ಸುಭಾಸ ಜಗದಾರ
----------------------------------
ನಿಸ್ವಾರ್ಥ ಬದುಕು ನನ್ನದಾಗಲು, ನಾನೊಮ್ಮೆ ಸ್ವಾರ್ಥಿಯಾಗಬೇಕು ಉತ್ಸಾಹದ ಬದುಕು ನನ್ನದಾಗಲು, ನಾನೊಮ್ಮೆ ನಿರುತ್ಸಾಹಿಯಾಗಬೇಕು ಗೆಲುವು ನನ್ನದಾಗಲು, ನಾನೊಮ್ಮೆ ಸೋಲಬೇಕು ಸ್ನೇಹ ಜೀವ ನನ್ನದಾಗಲು, ನಾನೊಮ್ಮೆ ದ್ವೇಷ ಜೀವವಾಗಬೇಕು ಕಲ್ಲಿನ ವಿಗ್ರಹದ ಜೀವ ನನ್ನದಾಗಲು, ನಾನೊಮ್ಮೆ ಉಳಿ ಪೆಟ್ಟು ತಿನ್ನಬೇಕು ಆದರ್ಶ ಬದುಕು ನನ್ನದಾಗಲು, ನಾನೊಮ್ಮೆ ಆಕರ್ಷಕವಾಗಬೇಕು
----------------------------------
ನೋಂದಣಿ ಐಡಿ : KPFS2-6453