ಪ್ರೇಮ ಬರಹ
ರಚನೆ : ದಶರಥ ಎಸ್
----------------------------------
ಮೌನವ ತಾಳಿದೆ ನನ್ನ ಮನವು ನಿನ್ನ ಆಗಮನವಿಲ್ಲದೆ, ನೆನಪುಗಳು ಕೂಡ ಮರೆಯಾಗಿವೆ ನಿನ್ನ ಮುಗುಳು ನಗೆಯಿಲ್ಲದೆ,, ಹಾಜರು ನೀಡುವೆ ಎಂದು ಕಾಯುತ್ತಾ ನನ್ನ ಹಾಜರಾತಿ ಮರೆತಿರುವೆನು ಮನಸ್ಸು ಒಳಗೊಳಗೆ ನಿನ್ನ ಹೆಸರ ಕೂಗಿ ಕರೆಯುತಿರಲು ಕಪ್ಪು ಬಟ್ಟೆಯ ಹೊದಿಸಿ ಆಸೆಗಳ ಮುಚ್ಚಿ ಹಾಕಿರುವೆನು.. ಕಾರಣ ನುಚ್ಚುನೂರು ಮಾಡಿರುವೆ ನೀ ನನ್ನ ಹೃದಯವನು
----------------------------------
ನೋಂದಣಿ ಐಡಿ : KPFS2-6436