Submission 2182

ಒಮ್ಮೆ ಬಳಿ ಸುಳಿದು ಬಿಡು

ರಚನೆ : ಗುರುಮೂರ್ತಿ ಎಸ್

----------------------------------

ಬರಡಾದ ಮರುಭೂಮಿಯಂತಾಗಿದೆ, ನೀನಿರದ ನನ್ನ ಬದುಕಿದು. ಹೆಚ್ಚು ಕಾಯಿಸದಿರು ಈ ಹುಚ್ಚು ಮನಸನು ಕೋಟಲೆ ಕೋಟಿಗಳ ಎದುರಿಸಿ ಬಹಳ ಬಳಲಿಹೆ ಅದಾಗಲೇ. ದಿಟ್ಟ ಹೆಜ್ಜೆಗಳನಿಟ್ಟು ಅಮೃತವಾಗಿಯೋ,ವಿಷವಾಗಿಯೋ, ಒಮ್ಮೆ ಬಳಿ ಸುಳಿದು ಬಿಡು.. ಒಳಿತಾಗಿ ಬಂದರೆ, ನಿನ್ನೊಡನೆ ಅಮರವಾಗಿರುವೆ. ಅಂತ್ಯವಾಗಿ ಬಂದರೆ ಕಡೆಯಪಕ್ಷ ಒಡಲ ತುಂಬ ನಿನ್ನ ಇರಿಸಿಕೊಂಡು ನೆಮ್ಮದಿಯಿಂದ ಇಳೆಯ ತೊರೆವೆ

----------------------------------

ನೋಂದಣಿ ಐಡಿ : KPFS2-6432

21
Votes
213
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top