Submission 2180

ಮಳೆನಾಡು

ರಚನೆ : ಕಾರ್ತಿಕ್ ಎಸ್ ಕೆ

----------------------------------

ಕಾಯುವುದೇ ಕೆಲಸ ಎಂದು ಆಗುವುದೋ ಸೂರ್ಯನ ನೋಟ! ವಾರಗಟ್ಟಲೇ ಇಲ್ಲ ಶಾಲೆಯ ಆಟಪಾಠ, ಮನೆಯಲ್ಲಿ ಎಲ್ಲೆಲ್ಲಿ ಸೋರುವುದು ಎಂದು ಹುಡುಕಾಟ! ಮಳೆಯಲ್ಲಿ ನೆನೆದಾಟ, ಬೆಚ್ಚನೆಯ ಬಿಸಿಯೂಟ; ವಾರಗಟ್ಟಲೆ ವಿದ್ಯುತ್ ಇಲ್ಲದೆ ಪರದಾಟ ಮನೆಯಲ್ಲೇ ಕುಳಿತಿರಲು ಸಂಕಟ, ಹೊರ ಹೋಗಿ ಜಾರಿ ಬೀಳುವುದು ಪರಿಪಾಠ, ಮಳೆ ಕಮ್ಮಿ ಆದರೆ ಛತ್ರಿ ಹಿಡಿದಾದರೂ ಸುತ್ತಬೇಕು ಗದ್ದೆ ತೋಟ, ಯಾವ ಮರಬಿದ್ದಿದೆ? ಯಾರ ಮನೆಗೆ ನೀರು ನುಗ್ಗಿದೆ? ಎಂದು ತಿಳಿಯುವ ಚಟ, ಕೆಸರ ಸೀರೆಯುಟ್ಟು ಭೋರ್ಗರಯುವ ನದಿಯ ಆರ್ಭಟ, ರಮಣೀಯ ಜಲಪಾತಗಳ ಸುಂದರ ಮೈ ಮಾಟ! ಕರ್ಕಶ ಗಂಟಲಿನ ಕಪ್ಪೆಯ ಕಾಟ! ತನ್ನ ಕುಡಿಯ ಕಳೆದುಕೊಂಡ ಪಕ್ಷಿಗಳ ಚೀರಾಟ. ಮರೆಯುವುದು ಹೇಗೆ ಮಲೆನಾಡ ಮಳೆಗಾಲದ ಒಡನಾಟ!

----------------------------------

ನೋಂದಣಿ ಐಡಿ : KPFS2-6431

1
Votes
102
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top