Submission 2166

ರಾಮಾಯಣ ಹುಟ್ಟಿದ್ದು

ರಚನೆ : ಈರಣ್ಣ ಎನ್

----------------------------------

ಶ್ರೀರಾಮ ಕಥೆಯ ಕೇಳಿದ ವಾಲ್ಮೀಕಿ ಪಾವನ ಜೀವನವೆಂದ-ಆ ಆತ್ಮ ಸುಖಿ ಮನದೊಳುಟ್ಟಿತೊಂದು ಆಕಾಂಕ್ಷೆ ರಾಮಾಯಣ ರಚನೆಯ ನಿರೀಕ್ಷೆ! ಬಾನೆತ್ತರಕ್ಕೆ ತುಂಬಿತೆದೆಗಾನಂದ ಮಜ್ಜನಕೆ ತಮಸಾ ನದಿಗೆ ಬಂದ ಆಶ್ಚರ್ಯ ರತಿ ಸುಖದಾನಂದ! ಎವೆಯಿಲ್ಲದೆ ಶಿಲೆಯಾಗಿ ತಾ ನಿಂದ. ನಾಕವದು ಕಾನನದ ಮಡಿಲಿಂದ ಕಳಚಿತು ಕ್ರೌಂಚೆಯ ರತಿ ಭಂಗ! ಚೀರುತ ಸತ್ತಿತು ಸರಳಿಂದ ಗೋಳಿನಲೆ ಮೇಲೆ ಅನುಬಂಧ. ತಾಯ್ಕರುಳಾಗಿ ನೊಂದನಾ ಋಷಿಮುನಿ ತಿಳಿಸುತ ವ್ಯಾಧನಿಡಿದ ತಾ ಲೇಖನಿ! ಕಟುಕನ ಕೈಯಿಂದ ಚಿಗುರಿತೊಸಾ ಜೀವಕಣ ತಪದ ಮನದಿಂದ ಬರೆದ ತಾ ರಾಮಾಯಣ!

----------------------------------

ನೋಂದಣಿ ಐಡಿ : KPFS2-6418

60
Votes
484
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top