ಗಲ್ಲು
ರಚನೆ : ಯಶಸ್ ನಗರ
----------------------------------
ಮುಳ್ಳುತಂತಿಯ ಮೇಲೆ ಇಲಿಮರಿಯ ಬಾಲ ಹರಿದು ಕೆಂಪುಜೊಲ್ಲು ಸುರಿಸಿದೆ ಏಕಾದಶಿ ಮುಗಿಸಿದ ರಣಹದ್ದು ಹೆಂಡತಿ ಕಟ್ಟಿಕೊಟ್ಟ ಜೋಳದ ತುಂಡಿಗೆ ಖಾರ ಸಾಲದೆಂದು ಜೈಲರು ಗೊಣಗಿ ಹ್ಞೂಂ ಅಂದ ವಾಚಿನ ಸದ್ದು. ಕೊಳಕು ಹೆಬ್ಬೆರಳಿಗೆ ಚಳಿ ತಾಗಲಿಲ್ಲ ರೆಪ್ಪೆ ಅಂಟಿತು. ನಡುಕ ನಿಂತಿತು. ಗಂಟಲುಬ್ಬಿತು. ಉಸಿರು ನಿಲ್ಲುವ ಹೊತ್ತಲ್ಲೂ ಮನೆ, ಮಡದಿ, ಮಕ್ಕಳು ನೆನಪಿಗೆ ಬರಲಿಲ್ಲ. ತಪ್ಪೆನಿಸಲಿಲ್ಲ. ಬೆಂಕಿಕಡ್ಡಿ ಬಂತು ಕಣ್ಮುಂದೆ. ಯಾಕೋ ಅದಕೊಂದು ಗುಲಾಬಿ ಫ್ರಾಕು. ಆವತ್ತಿನಂತೆ ಕಿಲಕಿಲ ನಕ್ಕು ಶ್ ಅಂತು. ಬೇಡ ನೋವಂತು. ತೀಡಬೇಕೆನಿಸಿತು.. ಮತ್ತೆ ಬೆಂಕಿ ಹಚ್ಚುವುದಕ್ಕೆ!
----------------------------------
ನೋಂದಣಿ ಐಡಿ : KPFS2-6392