Submission 2028

ನಮ್ ಹಳ್ಳಿ

ರಚನೆ : ಗೌತಮ್ ಎಸ್ ಗವಿಗೌಡ್ರು

----------------------------------

ಒಪ್ಪತ್ ಗಂಜಿ ಕಮ್ಮಿ ಆದ್ರೂ ನಮ್ ಹಳ್ಳಿ ನಮ್ಗೆ ಲೇಸು ಜನರ ನೆಮ್ಮದಿ ತಕ್ಕೊಬೋದ ಸಿಟಿ ಕಂತೆ ಕಾಸು ಸಿಟಿಲ್ ಇದ್ರೆ ಚೆನ್ನಾಗ್ ಇರ್ಬೋದು ಅನ್ನೋದ್ ನಮ್ ಭ್ರಾಂತು, ಎಷ್ಟ್ ದುಡುದ್ರು ಸಂಜೆ ಹೊತ್ತುಗ್ ಕೈಲಿಲ್ಲ ಚಿಲ್ರೆ ಕಾಸು. ಕಿವಿ ಕಿತ್ತೊಗೋಹಾಗ್ ಮಾಡೋ ಸದ್ದಿಗೆ ಹಾಕ್ತಿಲ್ಲಾ ಕೇಸು, ಮೂಗೂಗ್ ಬಡಿತಾವ್ ಬಸ್ಸು ಕಾರಿನ್ ಊಸು. ಕಂಪನಿ-ಫ್ಯಾಕ್ಟ್ರಿ ನಗರದ್ ಹೈಟೆಕ್ ಬೋನು, ನರಕದ್ ಜೀವ್ನ ಮೇಲಿಲ್ಲ ಎಲ್ಲಾ ಇಲ್ಲೇ ಕಾಣು. ಸಿಟಿ ಜನ್ರೆ ಕೇಳಿ ಎಲ್ರೂ ಒಗ್ಗಟ್ಟಾಗ್ ಜೀವ್ಸಿ, ಇರೋದ್ ಒಂದು ಜೀವ್ನ ಒಬ್ರುಗ್ ಒಬ್ರು ಪ್ರೀತ್ಸಿ. ನಮ್ ಮಕ್ಳುಗ್ ಸ್ವಲ್ಪ ಶುದ್ಧ ಗಾಳಿ ನೀರು ಉಳ್ಸಿ, ಪ್ಲಾಸ್ಟಿಕ್ ಬಳಸ್ದೆ ಮನೆಗೊಂದು ಸಸಿ ನೆಟ್ಟು ಬೆಳ್ಸಿ. ದೇವ್ರೆ ಮುಂದೊಂದ್ ಜನ್ಮ ಅಂತಿದ್ರೆ ಹಳ್ಳೀಲೆ ನನ್ನ ಹುಟ್ಸು, ಜನ್ರು ಮೇಲೆ ದಯೆ ಇದ್ರೆ ನಗರ ಎಲ್ಲಾ ಹಸಿರಾಗ್ ಕಾಣ್ಸು.

----------------------------------

ನೋಂದಣಿ ಐಡಿ : KPFS2-6341

32
Votes
213
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top