ಜಾರಿದವು ಕಂಬನಿ ಕೆನ್ನೆಯ ಮೇಲೆ
ರಚನೆ : ಸೂರಜ್ ಕುಮಾರ ಬಳಿಅಂಗಡಿ
----------------------------------
ದುಡಿಯುವ ಗಾಡಿ ಅಣಕಿಸಿ ನಿಂತಾಗ ಜಾರಿದವು ಕಂಬನಿ ಕೆನ್ನೆಯ ಮೇಲೆ ||ಪ|| ಬುದ್ಧ ಬರಲಿಲ್ಲ, ಬಸವ ಬರಲಿಲ್ಲ ಮಾನವ ಕುಲದ ಧರ್ಮವು ಬರಲಿಲ್ಲ ನೂಕಬೇಕು ನಾನು ವೈದ್ಯ ಸಿಗುವವರೆಗೂ ಹುಡುಕಬೇಕು ನಾನು ದಾರಿ ಕಾಣವರೆಗೂ ||೧|| ಸುಡು ಬಿಸಿಲಿಗೆ ದಣಿದಿದೆ ದೇಹ ಬಯಸುತ್ತಿದೆ ಕೊಂಚ ನೀರ ಸೃಷ್ಟಿಯ ಸವಾಲುಗಳು ಬೆನ್ನಟ್ಟಿ ಬಂದಾಗ ಬಸವಳಿದು ಜಾರಿದವು ಕಂಬನಿ ಕೆನ್ನೆಯ ಮೇಲೆ || ೨||
----------------------------------
ನೋಂದಣಿ ಐಡಿ : KPFS2-6330