Submission 1992

ವಸುಂಧರೆ.. ನಗಬಾರದೇಕೆ ನೀನು..!?

ರಚನೆ : Varun R Bhat

----------------------------------

ವಸುಂಧರೆ.. ನಗಬಾರದೇಕೆ ನೀನು..!? ಮಳೆಗೆ ಮುಳುಗಿ ಮತ್ತೆ ಬಾಯಾರಿಕೆ ಎನ್ನುತಿರುವೆ.. ಗಾಳಿಗೆ ನಿನ್ನೊಡಲು ನಲಿಯಲು ನೀ ಉಸಿರಿಲ್ಲ ಎನ್ನುತಿರುವೆ.. ನೀರಿಂಗಿ ಮೈತಣಿದಿರಲು ಧಗೆಯಿಳಿದಿಲ್ಲ ಎನ್ನುತಿರುವೆ.. ಹಸಿರಿನಲಿ ಮೈತುಂಬಿರಲು ಮನಬೇಯುತಿದೆ ಎನ್ನುತಿರುವೆ.. ವಸುಂಧರೆ.. ನಗಲಾರೆಯಾ ನೀನು..!? ಜೀರ್ಣಿಸಲಾಗದೇ ಉಳಿದವೆಲ್ಲವ ಹೊರಹಾಕಿ ನೀನಿಷ್ಟಪಟ್ಟ ಆ ನೆಮ್ಮದಿಯ ಬದುಕಿಗೆ ಮರಳಿ ಮತ್ತೆ ಮೊದಲಿನಂತೆ ನಗಬಾರದೇಕೆ ನೀನು..!?

----------------------------------

ನೋಂದಣಿ ಐಡಿ : KPFS2-6316

1
Votes
116
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top