Submission 1986

ಕನ್ನಡ ಭೂಪಟ.

ರಚನೆ : ಭೋವಿ ರಾಮಚಂದ್ರ, ಹರಪನಹಳ್ಳಿ

----------------------------------

ಹಾರಿಸು ಕನ್ನಡ ಬಾವುಟ ಸ್ಮರಿಸು ಎದೆಗೂಡಿನಲ್ಲಿ ಕನ್ನಡ ಭೂಪಟ ರನ್ನ ಪೊನ್ನ ಪಂಪರ ಸಾಲುಗಳು ಕನ್ನಡಾಂಬೆಯ ಮಡಿಲ ಚಿತ್ರಗಳು ಮಲೆನಾಡಿನ ಹಸಿರ ವನಸಿರಿಯ ಹಸಿರೆಲೆಗಳು. ಕೆಚ್ಚೆದೆಯ ಕಲಿಗಳ ನಾಡು ಬಸವ ಶರಣರು ಜನಿಸಿದ ಬೀಡು ನೇಗಿಲ ಯೋಗಿಯ ಬಲವು ಹಸಿವು ನೀಗಿಸುವ ಛಲವು ಕಾವೇರಿ ತುಂಗಭದ್ರಾ ಹರಿಯುವ ಚೆಲುವು . ಅರಿಶಿನ ಕುಂಕುಮದ ಸಿಂಧೂರ ಕನ್ನಡ ಬಾವುಟಕ್ಕೆ ಸೊಬಗಿನ ಆಧಾರ ಚಿನ್ನದ ಗಣಿಯ ಬೆಳಗುವ ಹೊನಲು ಜ್ಞಾನ ಭಂಡಾರದ ಸಾಹಿತ್ಯವೇ ಕಾವಲು.

----------------------------------

ನೋಂದಣಿ ಐಡಿ : KPFS2-6313

66
Votes
474
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top