Submission 1978

ಇದುವೇ ನನ್ನ ಕನ್ನಡ

ರಚನೆ : ಪ್ರಹ್ಲಾದ ಅಥಣಿ

----------------------------------

ಸಾವಿರಾರು ವರ್ಷಗಳ ಇತಿಹಾಸ ಬೆಳೆದ ನೆಲ ನನ್ನ ಕನ್ನಡ, ರನ್ನ–ಪೊನ್ನ–ಪಂಪರನ್ನ ರೂಪಿಸಿದ ಜೀವ ನನ್ನ ಕನ್ನಡ..! ಅಷ್ಠ ಜ್ಞಾನಪೀಠ ಗಳಿಸಿದ ಹೆಮ್ಮೆ ನನ್ನ ಕನ್ನಡ, ಉತ್ತುಂಗಕ್ಕೆರಿ ಮೆರೆಯುತ್ತಿರುವ ಗರ್ವದ ರಾಜ್ಯ ನನ್ನ ಕನ್ನಡ..! ಚಾಲುಕ್ಯ, ಹೊಯ್ಸಳ, ವಿಜಯನಗರ ಸಾಮ್ರಾಜ್ಯ ಹೆತ್ತ ತಾಯಿ ನನ್ನ ಕನ್ನಡ, ಬೆಳವಡಿ ಮಲ್ಲಮ್ಮ, ಕಿತ್ತೂರು ಚನ್ನಮ್ಮ, ಮೈಸೂರು ಒಡೆಯರ ನಾಡು ನನ್ನ ಕನ್ನಡ..! ಕೃಷ್ಣೆ–ಕಾವೇರಿ, ಭದ್ರಾ–ಹೇಮಾವತಿ, ಕಾಳಿ ರೂಪ ತೊಟ್ಟ ದೇವಿ ನನ್ನ ಕನ್ನಡ, ಪರ್ವತ ಶ್ರೇಣಿಗಳನ್ನ ಉದ್ಭವಿಸಿದ ಪವಿತ್ರ ಭೂಮಿ ನನ್ನ ಕನ್ನಡ..! ನನ್ನ ಮಾತಿಗೆ ಮಧುರ ಸೊಗಸು ನೀಡಿದ ನುಡಿ ನನ್ನ ಕನ್ನಡ, ನನ್ನ ಮನದಲಿ ಕಂಗೊಳಿಸುವ ದೀಪವಾದ ಶಕ್ತಿ ನನ್ನ ಕನ್ನಡ, ಸಾಹಿತ್ಯ–ಸಂಗೀತ–ಕಲೆಯ ತಾಯಿಯಾದ ನಾಡು ನನ್ನ ಕನ್ನಡ..! ಕರುನಾಡಿನ ಸಪ್ತಕೋಟಿ ಜನರ ಎದೆಗೂಡಲ್ಲಿ ಬಡಿವ ಬಡಿತ ಒಂದೇ ಕನ್ನಡ, ಕನ್ನಡಾಂಬೆಯ ಸಂತತಿಯ ಕಣಕಣದಲ್ಲೂ ಮಿಡಿಯುವ ಮಿಡಿತ ಒಂದೇ ಕನ್ನಡ, ಅದುವೇ ನನ್ನ ಕನ್ನಡ,ಕನ್ನಡ, ಕನ್ನಡ...!

----------------------------------

ನೋಂದಣಿ ಐಡಿ : KPFS2-6307

141
Votes
1,110
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top