ಕಂಗೆಟ್ಟ ಕಣ್ಣುಗಳು
ರಚನೆ : ರಂಗನಾಥ್ ಪೂಜಾರ್
----------------------------------
ಅಲ್ಲಿ ಇಲ್ಲಿ ಇರುವರು ಎಲ್ಲರ ಹಿಂದೆ ನಿಂತವರು ಖುಷಿಯನ್ನು ಕನಸಿನಲ್ಲಿಯೂ ಕಾಣದವರು ದುಃಖದೊಂದಿಗೆ ಜೀವನವನ್ನು ಸಾಗಿಸುತ್ತಿರುವವರು ಅವರೇ ನನ್ನ ಹತ್ತಿರದವರು ಮದುವೆಯ ಮನೆಯಲ್ಲಿ ಕಾಣದವರು ಮಸಣದ ಮನೆಯಲ್ಲಿ ಮೊದಲು ಇರುವವರು ಮದುವೆಯ ಮನೆಯಲ್ಲಿ ಮುಸುರೆ ತಿಕ್ಕುವವರು ಮಸಣದ ಮನೆಯಲ್ಲಿ ಮನೆ ತಿಕ್ಕುವವರು ಅವರೇ ನನ್ನ ಹತ್ತಿರದವರು ಒಮ್ಮೆಯೂ ಅಂಕಿತನಾಮದಲ್ಲಿ ಕರೆಸಿ ಕೊಂಡವರಲ್ಲ ಎಲ್ಲೋ ಒಮ್ಮೆ ರೂಢನಾಮ ಬಳಸಿದವರು ಸಾಯುವ ತನಕ ಅನ್ವರ್ಥಕ ನಾಮದಲ್ಲಿಯೇ ಕರೆಸಿಕೊಂಡವರು ಅವರೇ ನನ್ನ ಹತ್ತಿರದವರು
----------------------------------
ನೋಂದಣಿ ಐಡಿ : KPFS2-6289