ನೀ ಬೇಕು ಎನ್ನುವ ಬಯಕೆ
ರಚನೆ : ಕೀರ್ತಿ ಗೌಡ ಆರ್ .ಎಂ
----------------------------------
ಭಪನಿಲ್ಲದೆ ಆವರಿಸಿರುವಾಗ ಕತ್ತಲೆ ಧಾವಿಸಿರುವೆ ನೀ ಶಶಿಕಾಂತಿಯುಳ್ಳ ವರಲೆ ನಿಗಡದಲ್ಲಿ ಸಿಲುಕಿದ್ದ ಈ ಹೃದಯಕೆ ಶುರುವಾಯಿತು ನೀ ಬೇಕು ಎನ್ನುವ ಬಯಕೆ ಅಲೆದಂತೆ ಮಕರಂದಕೆ ಸಪ್ಪದ ದಿನವಿಲ್ಲ ಈ ಕಣ್ಣುಗಳು ನಿನ್ನ ಹುಡುಕದ ಪ್ರೀತಿ ಎಂದರೇನೆ ಅರಿಯದ ಈ ಹೃದಯಕೆ ಶುರುವಾಯಿತು ನೀ ಬೇಕು ಎನ್ನುವ ಬಯಕೆ ಇರುವ ತನಕ ಮರುಭೂಮಿಯಲ್ಲಿ ಪುಳಿಲು ಹಂಬಲಿಸುವುದು ಈ ಹೃದಯ,ನಿನ್ನ ಹಾಲ್ಗೆನ್ನೆಯ ಮೊಗವ ನೋಡಲು ನಿನ್ನ ಮೇಲೆ ಉಕ್ಕುತ್ತಿರುವ ಪ್ರೀತಿಗೆ ನಿಯಂತ್ರಣವಿಲ್ಲ ಏಕೆ? ನಿಲ್ಲದು ನೀನೆ ಬೇಕು ಎನ್ನುವ ಬಯಕೆ.
----------------------------------
ನೋಂದಣಿ ಐಡಿ : KPFS2-6278