Submission 1865

ಸುಡುವಲವು

ರಚನೆ : ದರ್ಶಿನಿ ತಿಪ್ಪಾರೆಡ್ಡಿ

----------------------------------

ಒಂಟಿತನ ನನ್ನ ಸುಡಬೇಕು ಸುಡುವಲ್ಲಿ ನಾ ಸೋತಿದ್ದಕ್ಕಾದರು ನನ್ನೊಂಟಿತನ ನನ್ನನೇ ಸುಡಬೇಕು ಸುಡುವಲವ ಬೇಗೆಯಲಿ ಬೆಚ್ಚಗಿರುವವ ಬೆಚ್ಚಗೇ ಇರಲಿ ನನ್ನಿನಿಯನವ ಬೆಚ್ಚಗಿರಲಿ ಒಲುಮೆಗೆ ಹಣತೆ ಎಂದುಕೊಂಡವ ಮನವ ಸುಡುವ ಕಿಡಿಯಾದ ಸುಟ್ಟು ಕರುಕಲಾಗುವ ಮುನ್ನ ಅವನನೊಮ್ಮೆ ತಬ್ಬಬೇಕು ಇಳೆಯ ಮಳೆ ಅಪ್ಪುವಂತೆ ದಣಿದ ನಲ್ಮೆ ತಣಿಸುವಂತೆ ಅವನನ್ನೊಮ್ಮೆ ತಬ್ಬಬೇಕು

----------------------------------

ನೋಂದಣಿ ಐಡಿ : KPFS2-6254

12
Votes
210
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top