Submission 1857

ನೀ ಬಿಟ್ಟು ಹೋದ ಕವಿತೆ

ರಚನೆ : ಶರತ್ ಕುಮಾರ್ ಎನ್

----------------------------------

ಹೇಳಿಬಿಡಬೇಕಿತ್ತು ನೀ ಹೋಗುವ ಮುನ್ನ, ಹೇಳದೆ ತಪ್ಪು ಮಾಡಿತು ಈ ನನ್ನ ಮನ. ಬೇರೆಯವರ ಅರಮನೆಯ ರಾಣಿಯಾಗಿರುವೆ, ಆದರೆ ನನ್ನ ಗುಡಿಸಲಿನ ದೀಪವಾಗಬೇಕಿತ್ತು. ಆ ದೀಪದ ಕೆಳಗೆ ನನ್ನ ಬದುಕು ನಿಂತಿತ್ತು! ನಿನ್ನ ನಗುವಿನ ಸದ್ದು ಗುಯಿಗುಟ್ಟುತ್ತಿದೆ ನನ್ನ ಕಿವಿಯಲ್ಲಿ, ಅದು ಒಂದು ಸಾಕು ಈ ನನ್ನ ಮುಂದಿನ ಬಾಳಲ್ಲಿ. ನಾ ನಿನ್ನೆ ಏಕೆ ಪ್ರೀತಿ ಮಾಡಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ ನನ್ನಲ್ಲಿ. ಆದರೂ ಬದುಕುವೆ ನಾ ನಿನ್ನ ಸವಿ ನೆನಪಲ್ಲಿ. ಹೋಗಿ ಬಾ ಮತ್ತೆ ಸಿಗುವೆ ಮುಂದಿನ ಜನ್ಮದಲ್ಲಿ.

----------------------------------

ನೋಂದಣಿ ಐಡಿ : KPFS2-6249

33
Votes
221
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top