Submission 1855

ಹಡೆದವಳ ಸವಿನೆನಪು

ರಚನೆ : ಜೆನಿಫರ್ ಡಿಸೋಜಾ

----------------------------------

ಪ್ರತಿದಿನ ಬೆಳಗ್ಗೆ ಎದ್ದ ಕ್ಷಣ ನೆನೆಯಬೇಕವಳನ್ನು, ಬಸಿರಲ್ಲಿ ಕೂಡಿಟ್ಟು ಉಸಿರನ್ನು ತುಂಬಿ ಕೊಟ್ಟಿರುವವಳನ್ನು... ತುತ್ತು ಅನ್ನ ಬಾಯಿಗಿಡುವ ಮುನ್ನ ನೆನೆಯಬೇಕವಳನ್ನು, ಉದರ ಕೇಳುವ ಮುನ್ನ ಹಸಿವನ್ನು ತಣಿಸಿದವಳನ್ನು.. ಹೊರ ಬಂದು ಕಾಲ ಮೇಲೆ ನಿಂತಾಗ ನೆನೆಯಬೇಕವಳನ್ನು, ಹೆಜ್ಜೆ ಹೆಜ್ಜೆಗೂ ಕೈಹಿಡಿದು ಬಾಳ ದಾರಿಯಲ್ಲಿ ನಡೆಸುವವಳನ್ನು.. ನೋವು ನಲಿವಿನ ಸ್ಥಿತಿಗಳ ನಡುವೆ ನೆನೆಯಬೇಕವಳನ್ನು, ನಮ್ಮ ನಗೆಗಡಲಲ್ಲಿ ತನ್ನ ನೋವನ್ನೆಲ್ಲ ಕರಗಿಸುವವಳನ್ನು.. ದೇವರ ಗುಡಿಯ ಎದುರು ನಿಂತಾಗ ನೆನೆಯಬೇಕವಳನ್ನು, ಮಮತೆ, ಕರುಣೆ, ತ್ಯಾಗ, ಪ್ರೀತಿ ತುಂಬಿಕೊಂಡ ದೇವತೆಯಾಗಿರುವವಳನ್ನು.. ಇರುಳಲ್ಲಿ ಬೆಚ್ಚನೆ ಹೊದ್ದು ಮಲಗುವ ಮುನ್ನ ನೆನೆಯಬೇಕವಳನ್ನು, ಮಡಿಲಲ್ಲಿ ಮಲಗಿಸಿಕೊಂಡು ನಾಳೆಯ ಕನಸನ್ನು ಕಟ್ಟಿಕೊಟ್ಟವಳನ್ನು.. ಬಾಳಿನ ಪ್ರತಿ ಗಳಿಗೆಯಲ್ಲೂ ನೆನಯಬೇಕವಳನ್ನು, ನಮ್ಮ ಏಳಿಗೆಗಾಗಿ ತನ್ನ ಜೀವವನ್ನೇ ಮುಡಿಪಾಗಿ ಇಟ್ಟವಳನ್ನು..!!

----------------------------------

ನೋಂದಣಿ ಐಡಿ : KPFS2-6248

69
Votes
406
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top