ನೀತಿಪಾಠ
ರಚನೆ : ಸೌಮ್ಯ ಕಾಶಿ
----------------------------------
ಒಡೆದಿತ್ತು ಆಣೆಕಟ್ಟು, ಮುರಿದಿತ್ತು ಸೇತುವೆ, ಮಳೆಗಾಳಿಯ ಅಬ್ಬರಕ್ಕೆ ಕುಸಿದಿತ್ತು ಎತ್ತರೆತ್ತರದ ಕಟ್ಟಡ, ಅಲೆಗಳ ಆರ್ಭಟಕ್ಕೆ ಕೊಚ್ಚಿಹೋಗಿತ್ತು ಅಭಿವೃದ್ಧಿಯ ಹೆಸರಲ್ಲಿ ಬೀಗುತ್ತಾ ಕಟ್ಟಿದ ಪಟ್ಟಣ, ಸಿಡಿಲಿನ ಅಬ್ಬರಕ್ಕೆ ಮೂಲೆಸೇರಿತ್ತು ಆಡಂಬರದ ಆಟ, ಧಗ್ಗನೆ ಉರಿಯುತಿರುವ ಜ್ವಾಲೆಗೆ ಬೂದಿಯಾಗಿತ್ತು ಅಹಂಕಾರದ ನೋಟ, ದೇವರಾಗಲು ಹೊರಟವರಿಗೆ ಹೇಳಿಕೊಟ್ಟಿತ್ತು ಪ್ರಕೃತಿ ನೀತಿಪಾಠ!
----------------------------------
ನೋಂದಣಿ ಐಡಿ : KPFS2-6245