ಕಾಕ ಸಂಸಾರ
ರಚನೆ : ಎಸ್. ಆಶಾ
----------------------------------
ಮನೆಯೆದುರ ಮರದಲೊಂದು ಕಾಕ ಸಂಸಾರ ಇಂದೇಕೋ ಅಲ್ಲಿ ಗಡಿಬಿಡಿ ಗಲಿಬಿಲಿ ಚೀರಾಟ ಕಿವಿಗಪ್ಪಳಿಸಿ ಹೊರಗಿಣುಕಿದೆ ಕಾಕರಾಜನ ಬಳಗ ಬರುತಿತ್ತು ಹಾರಿ ಮರಿಹಕ್ಕಿ ಅಳುತಿತ್ತು ಚೀರಿ ಚೀರಿ ಇಹಲೋಕ ತ್ಯಜಿಸಿತ್ತು ತಾಯಿ ಹಕ್ಕಿ ಕಾಕ ಕೂಟದ ದುಃಖ ಇಮ್ಮಡಿಸಿತ್ತು ಬಗೆ ಬಗೆಯ ಭಾವನೆ ಹೊಮ್ಮಿತ್ತು ಕಣ್ಣಿಗೆ ಕಾಣದ ವಿಧಿಯಾಟ ಭಾವ ಬಂಧುತ್ವದ ತಾಕಲಾಟ ಕಾಗೆಯೇನು, ಗೂಗೆಯೇನು?ತಪ್ಪದು ಪೀಕಲಾಟ ಕರೆ ಬಂದರೆ ನಿಲ್ಲಲಾಗದು ಅರೆಕ್ಷಣ ಹೊರಡುವ ಸಿದ್ಧತೆಯೇ ಜೀವನ ನಿರಂತರ ನಡೆದಿರಲಿ ಮನದಿ ಉತ್ಖನನ
----------------------------------
ನೋಂದಣಿ ಐಡಿ : KPFS2-6241