ರೂಪಸಿಯ ನಾನು ಕಂಡೆ
ರಚನೆ : ನಂದೀಶ್ ಕರಿಚೌಡಿಯ
----------------------------------
ಧ್ಯಾನವೇ ಮಾಡಿ ಪಡೆದ ರೂಪಸಿಯ ನಾನು ಕಂಡೆ..... ಕಪ್ಪು ಜಡೆಯ ಹಿಂದೆ ನಡೆಯುವಾಗ ನಲುಗುವ ಜುಮುಕಿಯ ನಾನು ಕಂಡೆ... ಎದುರಿಗೆ ನಿಲ್ಲಲು ಧೈರ್ಯವಿಲ್ಲದೇ ಬೆಳಕಿನ ನೆರಳಲ್ಲಿ ಅವಳ ಸೌಂದರ್ಯವ ಕಂಡೆ... ಕನಸಿನ ಅಂಗಡಿ ತೆರೆಯುವ ಮನಸಿನ ಕನ್ನಡಿ ನೋಡುವ ರೂಪಸಿಯ ನಾನು ಕಂಡೆ.. ನಾ ಬರಿಯುವ ಪುಸ್ತಕಕೆ ಮುನ್ನುಡಿಯಾಗುವ ಭಾವನೆಯ ಬದುಕಿಗೆ ಭಿತ್ತಿ ಪತ್ರವ ಅಂಟಿಸುವ ರೂಪಸಿಯ ನಾನು ಕಂಡೆ... ಪ್ರೀತಿಯ ಅಂಕುರ ಇವಳ ಮೇಲಿದೆ ಅಭಿಮಾನವೇ ಜಾಸ್ತಿಯಾಗಿದೆ... ಮನದಲ್ಲೇ ಮುಗಿಲ ಮುಟ್ಟೋ ವರೆಗೂ ಪ್ರೇಮ ಪತ್ರ ಬರೆಯಲು ಬಾಳ ಪಯಣದ ಕೊನೆಯವರೆಗೂ ನನ್ನ ಪ್ರತಿ ಹೆಜ್ಜೆಗೂ ದಾರಿಯಾಗಲು ಮನವು ಬಯಸಿದೆ, ತನುವು ಕುಣಿದಿದೇ,ಹೃದಯ ಬಡಿದಿದೆ ಅವಳ ಹೆಸರಿನ ಜೊತೆಯಲಿನನ್ನ ಹೆಸರನ್ನು ಸೇರಿಸಲು ಬ್ರಹ್ಮ ದೇವರೇ ಭೂಮಿಗಿಲಿದಂತಾಗಿದೆ... ಧ್ಯಾನವೇ ಮಾಡಿ ಪಡೆದ ರೂಪಸಿಯ ನಾನು ಕಂಡೆ..... ರೂಪಸಿಯ ನಾನು ಕಂಡೆ...
----------------------------------
ನೋಂದಣಿ ಐಡಿ : KPFS2-6231