Submission 1824

ನೆನಪು

ರಚನೆ : ಶಾಂತನ್ ಜೆ

----------------------------------

ನೀ ಕೆದುಕುವವರೆಗೂ ನೀರಿನ ಸೆಲೆ ಇಲ್ಲ, ನೀ ಉಸಿರಾಡುವವರೆಗೂ ಆ ಸಮಯಕ್ಕೆ ಬೆಲೆ ಇಲ್ಲ, ನೀ ಕನವರಿಸುವವರೆಗೂ ಎಲ್ಲವೂ ನೀರಾಳ, ನಮ್ಮನ್ನು ನಾವು ಕಲಕುವವರೆಗೂ ಎಲ್ಲವೂ ನಿಶಬ್ಧ. ನೆನಪಿನಾಳದಲ್ಲಿ ಅಲೆಗಳ ಭೋರ್ಗರೆತವಿಲ್ಲ, ಕಡಲಿನ ಅಲೆಗಳು ವಾತ್ಸವದ ಸಂಕೇತ, ಆದರೆ ಅದರ ಆಳ ನೆನಪುಗಳ ಆಗರ. ನೆನಪಿನಂಗಳದಲ್ಲಿ ಎಲ್ಲವೂ ಅಚಲವಾಗಿರಲು, ನೀ ಮತ್ತೆ ಆ ಸರೋವರದಲ್ಲಿ ಈಜಬೇಕಷ್ಟೆ, ನೆನಪುಗಳಿಲ್ಲದ ಬದುಕು ಮರುಭೂಮಿಯ ಹಾಗೆ. ಸಮಯಾನುಸಾರ ಎಲ್ಲವೂ ನಿಶ್ಚಲ. ನೆನಪಿನಾಳದಲ್ಲಿ ಎಲ್ಲವೂ ಅಮರ.

----------------------------------

ನೋಂದಣಿ ಐಡಿ : KPFS2-6230

39
Votes
326
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top