Submission 1799

ನೀರೆ ನೀನಿರೆ

ರಚನೆ : ಪ್ರದೀಪ ರಾಠೋಡ

----------------------------------

ನಡುರಾತ್ರಿಯಲ್ಲಿ ನೀರೆಯ ನಡು ನೆನೆದು ನರಳಲು ನೆರವಾಗುವ ನಳನಳಿಸುವ ನಿರ್ಮಲ ನಡತೆಯ ನಾರಿಯರು ನಾಮುಂದು ನೀಮುಂದೆನ್ನುವ ನರರ ನಡುವೆ ನಡುಸಹಿತ ನಟಿಸಿ ನಾಳೆಯ ನೆನೆಯದೆ ನರನ ನೆಮ್ಮದಿಗೊಳಿಸುವರು ನಾಚಿಕೆಯ ನಿಟ್ಟುಸಿರನ್ನು ನಿಧನಿಸಿ ನಿಲ್ಲುವರು ನಡುಬೀದಿಯಲ್ಲಿ ನೆರವೇರಿಸಲು ನಿತ್ಯನವೀನ ನರತ್ನವ ನಾದಮಯ ನಿರಂತತೆಯ ನೆರವಿಂದ ನಾದ ನವೀನ ನವ್ಯತೆ ನಂದದ ನಂಜಿನ ನಾಗರಿಕತೆಯ ನೆನೆಗುದಿಗೆ ನೂಕಿ ನೆರವಾಗುವ ನಳಿನೆಯರು

----------------------------------

ನೋಂದಣಿ ಐಡಿ : KPFS2-6222

36
Votes
266
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top