ಕಂಡರು ಕಾಣದ ಕನಸು ನೀನು
ರಚನೆ : ಕೃತಿಕಾ ಎನ್
----------------------------------
ಕಂಡರು ಕಾಣದ ಕನಸು ನೀನು, ಕನಸಿನಿಂದ ಎಚ್ಚರಗೊಂಡು ಮುಗುಳ್ನಗುವೆನು. ಬಯಸಿದರು ಬರದ ಅದ್ಬುತ ಕಲ್ಪನೆ ನೀನು, ಕಲ್ಪನೆಗಳ ನೆನೆದು ಕಳೆದೇ ಹೋಗುವೆನು. ದೂರದಲ್ಲೆ ಮಿನಿಗುವ ತಾರೆ ನೀನು, ತಾರೆಗಳಲ್ಲೇ ನಿನ್ನನು ಕಂಡು ಹರ್ಷಿಸುವೆನು. ಬಾನಲ್ಲಿ ಕಂಗೊಳಿಸುವ ಚಂದಿರ ನೀನು, ಆ ಚಂದಿರನ ಪ್ರತಿಬಿಂಬದಲ್ಲೆ ನಿನ್ನ ಕಂಡು ಖುಷಿ ಪಡುವೆನು. ಗಗನದಿ ಮೆರೆಯುವ ಸೂರ್ಯ ನೀನು, ಆ ಬೆಳಕಿನ ಸ್ಪರ್ಶದಲ್ಲಿ ನಿನ್ನ ಜೊತೆಯ ಊಹಿಸುವೆನು. ತಂಪಾಗಿ ಬೀಸುವ ತಂಗಾಳಿ ನೀನು, ತಂಗಾಳಿಯಲ್ಲಿ ನಿನ್ನ ಉಸಿರಾಟವ ಅನುಭವಿಸುವೆನು. ಎಷ್ಟು ಚೆಂದವೋ ನನ್ನೆಲ್ಲ ಅನಿಸಿಕೆ, ಬಂದು ಬಿಡು ನೀನು ತೀರಿಸಲು ನನ್ನೆಲ್ಲ ಬಯಕೆ.
----------------------------------
ನೋಂದಣಿ ಐಡಿ : KPFS2-6221