Submission 1775

ಆ'ಗ'ಮನ

ರಚನೆ : ಸಂತೋಷ ಲೋಕರೆ

----------------------------------

ನೀ ಬಂದೇ ಆ ಹುಣ್ಣಿಮೆಯ ಚಂದ್ರನಂತೆ, ಆ ನೀಲಿ ಆಕಾಶದಲ್ಲಿ ಕಂಗೊಳಿಸುವ ಕಾಮನಬಿಲ್ಲಿನಂತೆ, ಪ್ರತಿ ಮುಂಜಾನೆ ಈ ಧರೆ ಕಾಯುತ್ತಿರುವ ಆ ರವಿಯ ರಶ್ಮಿಯಂತೆ, ಬರಡು ಭೂಮಿಯಲ್ಲಿ ಸುರಿದ ಆ ಮುಂಗಾರು ಮಳೆಯಂತೆ, ಕೈಲಾಸ ಶಿವನ ಶಿರದಲ್ಲಿರುವ ಆ ಚಂದಿರನ ಕಳಶದಂತೆ, ಶತಕೋಟಿ ವರ್ಷ ಕಾದು ಕುಂತಿರುವ ತಪಸ್ವಿಗೆ ದೊರೆತ ವರದಂತೆ, ಕಡಲ ದಡ ಕಾಯುವ ಆ ಭೋರ್ಗರೆವ ಅಲೆಗಳಂತೆ, ವಸಂತಕಾಲದಲ್ಲಿ ಕೂಗುವ ಆ ಇಂಪಾದ ಕೋಗಿಲೆಯ ಕಲರವದಂತೆ, ಪರಾವಲoಬಿ ಜೀವಿಗಳಿಗೆ ಪರೋಪಕಾರಿಯಾಗಿ ಸಿಕ್ಕ ಪ್ರಾಣವಾಯುವಿನಂತೆ, ನಿರ್ಧನ ವ್ಯಕ್ತಿ ಗೆ ದೊರೆತ ಧಾನ್ಯಸಿರಿ ಸುಖಸಮೃದ್ಧಿಯಂತೆ, ಕನಸಿನಲ್ಲಿಯು ಕಣ್ಣುತೆರಸಿದ ಆ ಸ್ವಪ್ನಸುಂದರಿಯಂತೆ, ಭಗೀರಥನು ಈ ಪೃಥ್ವಿಗೆ ತಂದ ಆ ಜಲಧಾರೆಯಂತೆ, ಮಾದವ ಗೋಪಿಯ ಮಂಗಳನಾಧದ ಆ ಕೊಳಲಿನ ಶಬ್ದದಂತೆ, ಕಗ್ಗತ್ತಲೂ ಆವರಿಸಿದ ಈ ಮನಸಿಗೆ ಬೆಳಕಾಗಿ ಬಂದ ದಿವ್ಯಾದೀಪದಂತೆ, ಬರಿದಾದ ಬದುಕಿನಲ್ಲಿ ಬರಮಾಡಿಕೊಳ್ಳದೆ ಬಂದ ಅಮೃತಧಾರೆಯಂತೆ.

----------------------------------

ನೋಂದಣಿ ಐಡಿ : KPFS2-6211

1
Votes
116
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top