ಇಲ್ಲಿರುವದು ಮಿಥ್ಯ
ರಚನೆ : ಅನ್ನಪೂರ್ಣೇಶ್ವರಿ ಹಿರೇಮಠ
----------------------------------
ಅಲ್ಲಿಹೋಗೋದು ಸತ್ಯಇಲ್ಲಿರುವದು ಮಿಥ್ಯ ಭೂಲೋಕಕ್ಕೆ ಬಂದಿರೋದು ಬದುಕಿನಾಟದ ನಿಮಿತ್ಯ ಆಟ ಮುಗಿಯೋ ಮುನ್ನ ನೆನಿಬೇಕು ಮಹಾ ದೇವನ ನಿತ್ಯ|| ನಿನ್ನೀರುವಿಕೆಯ ಅರಿವು ಇರಬೇಕು ನಿನ್ನ ನೆನವು ಅಂತರಾತ್ಮದ ಸಂತ ನೀನೇ ಅನಂತ ನಿನ್ನೊಳು ಬೆರೆಸು ಈ ಜಗವ ನೀ ಮರೆಸು || ಶೂನ್ಯ ಈ ಜಗವು ಇರಲಿ ಈ ತಿಳಿವು ಎಲ್ಲವೂ ಮುಗಿದು ಹೋಗುವ ಮುನ್ನ ಅರಿತುಕೊ ಬದುಕಿನ ಮರ್ಮವನ್ನ ಸೃಷ್ಟಿಯ ಮುಂದೆ ನಾನು ನನ್ನೆದೆಲ್ಲ ಭ್ರಮೆ ಎಲ್ಲವೂ ನಶ್ವರ ಶಾಶ್ವತ ಆ ಪರಮೇಶ್ವರ||
----------------------------------
ನೋಂದಣಿ ಐಡಿ : KPFS2-6210