ಮದರಂಗಿ ಮಾಸುವ ಮುನ್ನ
ರಚನೆ : ಕವಿತ ಅವನಿ
----------------------------------
ನೂರಾರು ಕನಸ ಹೊತ್ತ ತರುಣಿ ಕಾದು ಕುಳಿತಿಹಳು ಹೊಸ್ತಿಲ ಬಳಿ ನಲ್ಲನಿಗಾಗಿ ಹೆಣ್ಣಾಗಿ ಹೊನ್ನಾಗಿ ಹೊನಲಾಗಿ ಹೋಗಲು ತವರಿನ ಹೊಸ್ತಿಲದಾಟಿ ದೂರವಾಗಲು ಅಣಿಯಾಗಿಹಳು ಅವಳು ಅವಳಾಗದೆ ಮದರಂಗಿಯಲ್ಲಿ ಮೂಡಿದ ಚಿತ್ತಾರದಂತೆ ತನ್ನದೇ ಸಂಸಾರದ ನೊಗವ ಹೊರಲು ಹೆಗಲುಗಳ ಸಿದ್ದವಾಗಿಸಿಹಳು ಆ ಬಾಲೇ ಪೆಟ್ಟು ಬೀಳುವ ಅರಿವಿಲ್ಲದೆ ಅವನ ತೀರದ ದಾಹ ದ್ರೋಹ ವ್ಯಾಮೋಹವ ಅರಿಯದೆ ಭೋಗದವಸ್ತುವೆಂದೇತಿಳಿದಿದ್ದಆತಆಕೆಗೂ ಒಂದು ಮನವಿದೆ ಎಂದು ತಿಳಿಯದ ಪ್ರೇತ ಕೊರಗುತಿದೆ ಆಕೆಯ ಮುಗ್ದ ಅಂತರಾತ್ಮ ಕೊನೆಗೂ ವರದಕ್ಷಿಣೆಭೂತಕ್ಕೆಬಲಿಯಾದಳು ಮಮತೆಯ ಮದರಂಗಿ ಮಾಸುವಮುನ್ನ....
----------------------------------
ನೋಂದಣಿ ಐಡಿ : KPFS2-6207