Submission 1767

ಬೆಸುಗೆಯ ಕಲಿಕೆ....

ರಚನೆ : ಚಿದಾನಂದ ಕೆ ಪಿ

----------------------------------

ಋಣವ ಸೇರಿಸಿ ಮನವ ಅರಳಿಸಿ ಬಂಧಿಸುವ ಹೊಸುಗೆ.... ನಲ್ಮೆಯ ನೈದಿಲ ನವನವೀನ ಸುಂದರ ಅಮೋಘ ಬೆಸುಗೆ.....! ದಾತೆಯಿಂದ ಕೂಸಿಗೆ.. ಮಗುವಿನಿಂದ ಮನಸ್ಸಿಗೆ.. ಹೊಂದಿಸುವ ಬಯಕೆ.... ಶಿಶುವೆಂಬ ಖಾಲಿ ಹೊತ್ತಿಗೆಗೆ ಅಕ್ಕರೆಯ ಅಕ್ಕರವ ತುಂಬುವ ಹರಕೆ.....! ಮತಿಯು ಬರುವ ಮುನ್ನ ಎದೆಯ ಮೇಲೆ ತೂಗಿಸಿ ಪೋಷಿಸೋ ವಾಡಿಕೆ .... ಬೆಳೆದಂತೆ ದಂಡಿಸಿ ತಿದ್ದಿ ,ಮೀಸೆಯ ಮರೆಯಲ್ಲಿ ನೊಂದು ತಿಳಿಸೋ ಬಾಳಿನ ಕಲಿಕೆ....! ಕತೆಯ ಕೇಳಿಸಿ, ಆಟ ಆಡಿಸಿ ,ಮಮತೆ ತೋರೋ ಹಿರಿ ಜೀವಗಳ ಇರುವಿಕೆ..... ಮುಂದೊಮ್ಮೆ ಕಣ್ಮರೆಯಾದಾಗ ಗೊರಕೆಯ ನೀತಿಯ ನೆನೆದು ಅಳಿಸುವ ಮರೀಚಿಕೆ......! ಸ್ನೇಹದ ನೆರಳ ಬಯಕೆ ,ಪ್ರೇಮಿಗಾಗಿ ಚಡಪಡಿಸುವ ಲವಲವಿಕೆ.. ಅದಕ್ಕಾಗಿ ಕೆಲ ಹಿಂಜರಿಕೆ...... ಓಹೋ..ಅವರ ಕಲ್ಪನೆಯಲ್ಲಿ ದೈವವಾಗುವ ಹಂಬಲ - ಕೇವಲ ಯವ್ವನದ ಕೇಕೆ..... ಸುಂದರ ಸಮಾಜದ ಅಶುದ್ಧ ಅಭಿವ್ಯಕ್ತಿಗಳೊಂದಿಗಿನ ಹೋಲಿಕೆ ನಿನಗೇಕೆ.....? ದೈವನಿರ್ಮಿತ ಬಾಳಕೊಂಡಿಯ ಮರೆತು ನೀ ತರುವೆ ಬೆಸುಗೆಯ ಭಾವನೆಗಳಿಗೆ ಧಕ್ಕೆ......! ನಿನ್ನ ಕಲ್ಪನೆಯ ಕಬ್ಬದಲ್ಲಿ ಮರೆತಿಹೆಯೋ?.. ಬೆಸುಗೆಯ ಕಲಿಕೆ... ನಿನ್ನ ನೈಜ ಅಸ್ತಿತ್ವವ ಕಳೆದುಕೊಂಡೆಯಲ್ಲೋ....ಬೇಡ.. ಖಂಡಿತ ಬೇಡವೋ..... ಓ ಮಂಕೆ......

----------------------------------

ನೋಂದಣಿ ಐಡಿ : KPFS2-6206

51
Votes
362
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top