Submission 1757

ಏನಿದೆ?

ರಚನೆ : ಪ್ರದೀಪ್ ಜೋಶಿ

----------------------------------

ಊರ ಸುತ್ತುವ ಮೋಡ ಸುರಿಯುವುದು ಇಲ್ಲೇಕೆ? ಬರೀ ಮಳೆಯೆ?! ಪ್ರತೀ ಹನಿಯಲ್ಲಿ ಏನೋ ಇದೆ ಇಡೀ ಗುಡಿಯೇ ಶಿಲೆ, ಎಲ್ಲ ಗೋಡೆಯಲೂ ಕೆತ್ತನೆ ಕಲೆ. ಮೂರ್ತಿಯಲ್ಲಷ್ಟೇ ಮಹಿಮೆ, ಬರೀ ದೇವರೆ?! ಭಕ್ತಿಯಲ್ಲೇನೋ ಇದೆ ನೂರಾರು ಸಂಖ್ಯೆಯಲಿ ಬಿದ್ದು, ಮಣ್ಣಿನೊಡನೆ ಸೆಣೆಸಿ ಸೀಳಿ ಹೊರಬರುವ ಆ ಒಂದು ಬೀಜ ಬರೀ ಸಸಿಯೇ?! ಮೊಳಕೆಯ ಛಲದಲ್ಲೇನೋ ಇದೆ ಎಲ್ಲೋ ಕುಳಿತು, ಯಾರನೋ ನೆನೆದು ಒದ್ದೆಯಾಗುವ ಕಣ್ಣಾಲಿಗಳಿಗೆ ಕಾರಣ ಬರೀ ಕಣ್ಣೀರೆ?! ವಿರಹದಲ್ಲೆಲ್ಲೋ ಸುಖವಿದೆ ಕೇರಿ ಮಧ್ಯದಿ ಬೇಡುವ ತಿರುಕನಿಗೆ ಬಂಧುಗಳಿಲ್ಲ ನಿನ್ನ ಮನೆಯ ಅನ್ನ ಅವನ ಮುರುಕು ಬಟ್ಟಲಲಿ ಬರೀ ಭಿಕ್ಷೆಯೇ?! ಋಣ ಗುಪ್ತಗಾಮಿನಿ, ಆತ್ಮಕ್ಕೆ ಎಲ್ಲಿಯೋ ಜೊತೆಯಿದೆ

----------------------------------

ನೋಂದಣಿ ಐಡಿ : KPFS2-6199

14
Votes
228
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top