ಅಧಮ
ರಚನೆ : ಪ್ರಕಾಶ ಭೇರ್ಗಿ
----------------------------------
ಉಂಡು ದಣಿಸಿದ ದೇಹವಧಮ ಇದ್ದು ಬಳಸದ ಬುದ್ಧಿ ಅಧಮ ಕೊಟ್ಟು ಕೆರಳುವ ನೀತಿ ಅಧಮ ಕೊಡದೆ ಕೆಟ್ಟ ಧರ್ಮ ಅಧಮ ಕೊಟ್ಟು ಕೇಳೋ ಸ್ನೇಹ ಅಧಮ ಕೊಡದೆ ಇಟ್ಟ ಶೌರ್ಯ ಅಧಮ ನಿಂತು ನೋಡು ಕಣ್ಣು ಅಧಮ ಪೊಳ್ಳು ನುಡಿಯೊ ಬಾಯಿ ಅಧಮ ನೀಡಿದ ಕೈಯ ಅಧಮ ಕೇಳದ ಕಿವಿಯದು ಅಧಮ ಮಿಡಿಯದ ಮನಸದು ಅಧಮ ನನ್ನೊಳಿರುವ ಅಧಮರ ಮರೆಸಿ- ನಿನ್ನ ಅಂಧಕಾರದ ಬಗೆಗೆ ನಾನೇಕೆ ಕೊಂಕಾಡಲಿ
----------------------------------
ನೋಂದಣಿ ಐಡಿ : KPFS2-6198