Submission 1723

ನೀನೇ ಶೀರ್ಷಿಕೆ ಈ ಬಾಳಿಗೆ

ರಚನೆ : ಶ್ರೀಮತಿ ಕವಿತಾ ಹಿರೇಮಠ

----------------------------------

ಬಾಳಿನಲ್ಲಿ ಸರಿಗಮಪ ನುಡಿಸಿದೆ ಅನುರಾಗದ ಅಲೆಯಲ್ಲಿ ತೇಲಿಸಿದೆ ನನ್ನೆಲ್ಲಾ ಕನಸುಗಳ ನನಸು ಮಾಡಿದೆ ನಿನ್ನ ತೋಳಲ್ಲಿ ಖುಷಿಯ ಖಜಾನೆಯಿದೆ!! ನೀ ಜೊತೆಗಿರಲು ಜಾಗವಿಲ್ಲ ಸೋಲಿಗೆ ನನ್ನ ಪಿಸುಮಾತುಗಳ ಆಲಿಸು ಮೆಲ್ಲಗೆ ಏನೆಂದು ಹೆಸರಿಡಲಿ ನಮ್ಮ ಪ್ರೀತಿಗೆ ನೀನೇ ಶೀರ್ಷಿಕೆ ನನ್ನ ಈ ಬಾಳಿಗೆ !! ಮುಸ್ಸಂಜೆಯ ಕೆಂಪು ಬಣ್ಣವನ್ನು ತಂದು ನಿನಗಾಗಿ ಬರೆಯಲೇನು ಕವಿತೆಯೊಂದು ಲೋಕಕ್ಕೆ ಹೃದಯದ ಒಡೆಯ ನೀನೆಂದು ಕೂಗಿ ಹೇಳುವ ಬಯಕೆಯಾಗಿದೆ ಇಂದು!!

----------------------------------

ನೋಂದಣಿ ಐಡಿ : KPFS2-6181

18
Votes
184
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top