ಅಪ್ಪ
ರಚನೆ : ಸಂತೋಷ್ ತೀರ್ಥಹಳ್ಳಿ
----------------------------------
ಬಳಲಿದ ಕೈಗಳಿಗೆ ಬಾಳಿಕೆಯ ಅರಿವಿಲ್ಲ. ಜೀವದ ಕೊಂಡಿಯ ಹಸಿವು ಮನವ ಬಿಡುತ್ತಿಲ್ಲ. ಕೊಂಡ ವಸ್ತುವಿನ ಮೌಲ್ಯವ ಚಿಂತಿಸಿದವನಲ್ಲ. ನೀ ನಡೆದ ಹಾದಿಯಲ್ಲೇ ಒಳಿತುಂಟು ದಿನವೆಲ್ಲಾ..! ನೀ ನನ್ನ ಬಡಿದಾಗ ಮನವು ಹುಚ್ಚೆದ್ದು ಬೈದಿತ್ತು. ನೀ ನನಗೆ ನೇರ ನಿಷ್ಟುರವಾದಿಯೇ ಎಂಬ ಬಿರುದಿತ್ತು. ಟೀಕಿಸುವ ಮನದ ಗೋಡೆಯಲ್ಲಿ ನನ್ನತನ ಮೇಲಿತ್ತು. ನಿನ್ನ ಗದರಿಕೆಯ ಕಾರಣ ತಿಳಿಯದೇ ಹೋಗಿತ್ತು. ನಿನ್ನ ಕೈ ಪೊಟ್ಟಣದ ದಾರಿ ಹೋಕನು ನಾನು. ಇದಕ್ಕಿಂತ ಬೇಕಿರಲಿಲ್ಲ ಪ್ರಪಂಚದಲ್ಲಿ ಇನ್ನೇನು. ಮುಳ್ಳಿನ ಹಾದಿಯಲ್ಲಿದ್ದು ಹೂವ ದಾರಿಯ ತುಳಿಸಿದೆ. ಮಣ್ಣ ಮನೆಯಾದರೂ ಮಂಚದರಮನೆಗಿಂತ ಮಿಗಿಲಾಗಿಸಿದೆ. ನೀ ಕಂಡ ಜೀವನ ಈಗ ನಾ ಅಂದಾಜಿಸುವುದು ಕಷ್ಟ. ನಿನ್ನ ಗದರಿಕೆಯಲ್ಲಿ ಅಂದು ಅರ್ಥವಿತ್ತು. ಆದರೆ ಇಂದು ನನ್ನ ಗದರಿಕೆಯಲ್ಲಿ ನಿನ್ನೆದುರು ಸೋತ ಕಷ್ಟವಿತ್ತು.
----------------------------------
ನೋಂದಣಿ ಐಡಿ : KPFS2-6180