Submission 1639

ನನ್ನಾಸೆಗಳು

ರಚನೆ : ಹರಿಪ್ರಸಾದ್ ಶೆಟ್ಟಿ

----------------------------------

ಗೆಳೆಯ ಕೇಳಿಲ್ಲಿ ನನ್ನಾಸೆಗಳು ಬತ್ತಿಹೋಗಿವೆ ಬರಗಾಲದಿ ಕೆರೆ ನೀರು ಇಂಗಿಹುವ ಹಾಗೆ ಪಶುಪಕ್ಷಿಗಳ ಮೂಕ ವೇದನೆಗಳಿಗೆ ಸ್ಪಂದಿಸಬೇಕೆಂಬಾಸೆ ಬದುಕಿಗೆ ಕವಿದಿರುವ "ವಿಚ್ಛಿದ್ರ ಕತ್ತಲೆಗೆ" ಹೊಸ ಬೆಳಕನ್ನಿಡುವ ಆಸೆ ಓದುವ ಒತ್ತಡದಲ್ಲಿ ಬಾಲ್ಯದ ಮುಗ್ದತೆಯನ್ನು ಮರೆಯುವ ಚಿಣ್ಣರಿಗೆ ಆಸರೆಯಾಗುವ ಆಸೆ ಆಧುನಿಕತೆಯ ನೆಪದಲ್ಲಿ ದುಶ್ಚಟಗಳಿಗೆ ದಾಸರಾಗುವ ಯುವಪೀಳಿಗಿಗೆ ತಿಳಿಹೇಳುವ ಆಸೆ ಆಸೆ ... ನೂರಾರು.... ಆಸೆ ಆದರೆ ... ಏನು ಮಾಡಲಿ ಗೆಳೆಯ ನನ್ನೆದೆಯಲ್ಲಿ ಯಾವುದೋ ದುಷ್ಶಕ್ತಿ ಪುಕ್ಕಲುತನವ ತುಂಬಿಸಿದಂತಾಗಿ ನನ್ನ ತೋಳುಗಳನ್ನು ಯಾವುದೋ ದುಷ್ಶಕ್ತಿ ಹಿಡಿದೆಳೆಯುವಂತಾಗಿ ತೋಳತ್ತಲು ಶಕ್ತಿಯಿಲ್ಲ, ಪ್ರತಿಭಟಿಸಲು ಧೈರ್ಯವಿಲ್ಲ ಹಣ ಬಲದ ಮುಂದೆ ನಾನೇನಲ್ಲ ಅರಿವಾದಾಗ ನನ್ನಾಸೆಗಳು ಕಮರಿ ಹೋಯಿತಲ್ಲ

----------------------------------

ನೋಂದಣಿ ಐಡಿ : KPFS2-6138

8
Votes
185
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top