Submission 1635

ಗೊಂದಲಲಿ ಶಾಂತಿಯ ಹಂಬಲ

ರಚನೆ : ಸಂತೋಷ್ ಕುಮಾರ್ ಕೆ ಆರ್

----------------------------------

ಎಲ್ಲೆಲ್ಲೂ ಗೊಂದಲ ಗಡಿಬಿಡಿ ಸಾವಧಾನದಿ ಉಣ್ಣಲು ಬಿಡುವಿಲ್ಲ ಬಿಡಿ ಸದಾ ಒಂದಿಲ್ಲೊಂದು ಜೀವನ ಪರೀಕ್ಷೆ ಎಂದಿಗೂ ನೆಲೆಸಲಿ ಮನದಿ ಶಾಂತಿಯ ನೀಲಿ ನಕ್ಷೆ ಕಡಲ ಏರಿಳಿತಗಳ ನಡುವೆ ಶಾಂತ ಸಾಗರಕ್ಕುಂಟು ಮನ್ನಣೆ ಕೂಗಾಟ ಆರ್ಭಟಗಳ ನಡುವೆ ಮೌನ ಮನವೇ ಜಾಣೆ ಸದಾ ಪೋನುಗಳ ರಿಂಗಣ ಯಂತ್ರಗಳ ನಿಲ್ಲದ ಶಬ್ಧ ಜಾಗರಣ ಶಬ್ಧಗಳ ಒಡಲಲ್ಲಿ ಮೌನಕ್ಕುಂಟು ಅರ್ಥ ಗೊಂದಲಗಳ ಗಣಿಯಲ್ಲಿ ಶಾಂತಿಯೇ ಶ್ರೇಷ್ಠ ರತ್ನ...

----------------------------------

ನೋಂದಣಿ ಐಡಿ : KPFS2-6136

40
Votes
356
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top