ಮೊದಲ ಮಧುರ ಕ್ಷಣ
ರಚನೆ : ಪ್ರನುಷ
----------------------------------
ಮರೆಯಲಾಗದ ಆ ಮೊದಲ ಭೇಟಿ, ಅವನ ಮುಗುಳು ನೋಟ, ನಡೆಯಿತಂದು ನಯನಗಳ ಮೌನ ಕಲಹದಾಟ. ಚಂದ್ರನ ಮಡುವಿನಲ್ಲಿ ಅಸ್ತವಾಗಿ, ಅನುರಾಗದ ಕಿರಣದೂಂದಿಗೆ ಪ್ರಭಾತವಾದೆ, ತೂಗುತ್ತಿರುವ ಮನದ ಮೇಘಗಳಲ್ಲಿ ಮರೆಯಾಗಿ, ಹೃದಯದ ಓಣಿಯಲ್ಲಿ ಮಳೆಯಾದೆ. ಎಷ್ಟೋ ಹೇಳುವುದಿದ್ದರೂ ಸ್ಥಗಿತವಯಿತು ಮನಗಳು ಸಮಯದಂತೆ, ಆದರೂ ತಿಳಿಯಲಿಲ್ಲ ಹೇಗೆ ಕಳೆಯಿತು ಕ್ಷಣಗಳು ಕ್ಷಣಾಂಶದಂತೆ. ಇನ್ನೆಂದಾಗುವುದು ಅಂಥಹ ಮಧುರ ಪ್ರೇಮ ಸಂವಾದ, ಕಣ್ಣುಗಳು ನಿರೀಕ್ಷಿಸುತ್ತಿದೆ ಮತ್ತೆ ಮಾಡಲು ಪ್ರೀತಿಯ ಅನುವಾದ.
----------------------------------
ನೋಂದಣಿ ಐಡಿ : KPFS2-6127