Submission 1615

ಲಕ್ಷ್ಮಣನ ಊರ್ಮಿಳೆ

ರಚನೆ : ರಂಜಿತಾ ಹೆಗ್ಡೆ

----------------------------------

ಇಳೆಯಾಗಿ ಕಾದಳು..., ನೀಲ ನಭದ ಕೊನೆಯ ತಾರೆ ಕೆಳಗಿಳಿಯುವವರೆಗೂ...! ಮಳೆಯಾಗಿ ಕಾದಳು..., ಬಾಗಿಹ ಮಳೆಬಿಲ್ಲ ಬಣ್ಣ ಕಳೆದು ಹೋಗುವವರೆಗೂ..! ಅಲೆಯಾಗಿ ಕಾದಳು ತನ್ನೊಳಗೆ ಮೀನ ಹೆಜ್ಜೆ ಮೂಡುವವರೆಗು...! ಊರ್ಮಿಳೆಯಾಗಿ ಕಾದಳು.., ಅವಳೊಡೆಯ ಲಕ್ಷ್ಮಣ ಹಿಂದಿರುಗುವವರೆಗೂ...! ಸಹನೆಯೊಳು ಇವಳು ಧರೆ..! ಅಪ್ಪಿಹಳು ದೀರ್ಘ ನಿದಿರೆ! ನೋವಿನ ಕುಲುಮೆಯೊಳಗೆ ಬೆಂದು ಹೋದಳೆ...? ನಲಿವಿರದ ಕೋಟೆಯೊಳಗೆ ನೊಂದು ಹೋದಳೆ...? ಲಕ್ಷ್ಮಣನ ಊರ್ಮಿಳೆ...!?

----------------------------------

ನೋಂದಣಿ ಐಡಿ : KPFS2-6125

8
Votes
162
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top