Submission 1601

ಅವಳು

ರಚನೆ : ಲೆನಿನ್ ಲೋಪೆಸ್

----------------------------------

ಪಿಸುಮಾತು ಕಿರುನಗೆಗಳಲ್ಲಿ ಮುಂಜಾವಿನ ಮಂಜಿನಲ್ಲಿ ತೆರೆಯ ಸೂಸಿ ಬಂದ ರವಿ ಕಿರಣದಂತೆ ಒಂಟಿಯಾಗಿ ಬಂದಳು ಅವಳು! ತಂಗಾಳಿಯ ಒಡಲಿನಲ್ಲಿಯೂ ಗೆಜ್ಜೆ ಹೆಜ್ಜೆಯ ದನಿಯಲ್ಲಿಯೂ ಪ್ರೀತಿ ಬೆಳಕ ಸೂಸಲು ದೂರ ದೂರದಿ, ನಾ ಸರಿದೆ ಸನಿಹ ಬಂದು ನಿಂತಳು ಅವಳು! ಕನಸುಗಳಿಗೆ ಅರಮನೆಯ ಕಟ್ಟಿ ಬಾಳ ಪಥದಿ ಹೆಜ್ಜೆಯನಿಟ್ಟು ಪ್ರೀತಿಯು ಇಬ್ಬನಿಯಂತೆ ಕರಗಿ ನೆರವಾದಳು ಅವಳು ಕೋಪ ತಾಪದಿ ಪಯಣದ ಹಾದಿಯಾಯ್ತು ಜಂಟಿಯಾಗಿ! ಕೂಡಿ ಕಳೆದ ಕ್ಷಣಗಳು ಸುರಿದು ಭರ್ತಿ ಮಾಡಿದ ನೆನಪುಗಳು ಮನದಿ ತುಂಬೆಲ್ಲ ನಗುತಲಿರುವುದು ನಿನ್ನನ್ನೇ ಬಯಸುವ ಈ ಪ್ರೀತ ಹೀಗೆ ಇರಲಿ ಬದಲಾಗದಂತೆ

----------------------------------

ನೋಂದಣಿ ಐಡಿ : KPFS2-6060

88
Votes
643
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top