ಮಲ್ಲಿಗೆ ಮನಸು
ರಚನೆ : ಪ್ರಮೋದ್ ಯು. ಬಿ.
----------------------------------
ಹುಣ್ಣಿಮೆ ರಾತ್ರಿಯಲಿ ತಣ್ಣನೆ ಗಾಳಿಯಲಿ ತೂಗಿ ಮಾಗುತ್ತಿದೆ ಎಳೆ ಮಲ್ಲಿಗೆ ಚಂದದ ಚಂದುಳ್ಳಿ ಹಾಡುತ್ತ ಬಳಿ ಬರಲು ಸುಮವರಳಿತು ಸುಯ್ ಎನ್ನುವ ಸ್ವರದೊಂದಿಗೆ ಸೆರಗಿನ ಮರೆಯಲ್ಲಿ ಅವಳಂದ ಕಂಡಾಗ ಗಿಡದ ಘಮವೆಲ್ಲ ಮೈತುಂಬಿತು ಸೀರೆಯ ತುದಿ ಹಿಡಿದು ಮೆಲ್ಲಗೆ ಜಗ್ಗುತ್ತ ನೆಲಕೆ ಹಾರಿ ಅವಳ ಮೊಗ ಕಂಡಿತು ಶಶಿ ತಂದ ಬೆಳಕಲ್ಲಿ ಮಲ್ಲಿಗೆಯ ಕಂಡವಳೇ ಓಡಿದಳು ಅದರತ್ತ ನಗುವ ಚೆಲ್ಲಿ ಬೆರಳ ತುದಿಯಲ್ಲಿ ಹೂವಿನ ನಡು ಹಿಡಿದು ಪರಿಮಳವ ಬಚ್ಚಿಟ್ಟಳು ತನ್ನುಸಿರಲ್ಲಿ
----------------------------------
ನೋಂದಣಿ ಐಡಿ : KPFS2-6119