Submission 1591

ನನ್ನ ಕನ್ನಡತಿ

ರಚನೆ : ಮಲ್ಲಿಕಾರ್ಜುನ್ ಎಚ್ ಕೆರುಡಿ

----------------------------------

ಬೆಳಗಾವಿಯ ಬೆಡಗಿಯು, ಮಲೆನಾಡಿನ ಹಸಿರಿನ ಸೀರೆಯ ತೊಟ್ಟು, ಕಾವೇರಿಯ ನದಿಯ ನೀರನ್ನು ಸವಿದು, ಮೈಸೂರು ಮಲ್ಲಿಗೆ ಮುಡಿದ, ಕೋಲಾರದ ಚಿನ್ನದ ತೊಟ್ಟ ನನ್ನ ಕನ್ನಡತಿ ಯಾದಗಿರಿಯ ಯಾದವರ ಕಂಡು ಹಾವೇರಿಯ ಯಾಲಕ್ಕಿ ಮಾಲೆಯ ಧರಿಸಿ ಬಾದಾಮಿಯ ಬನಸಿರಿಯ ತಂದು ಉತ್ತರ ಕನ್ನಡದ ಸೊಗಡನ ನೋಡಿ ಧಾರವಾಡದ ದಾರಿ ಇದ್ದಕ್ಕೂ ಮಠಗಳ ಕಂಡ ನನ್ನ ಕನ್ನಡತಿ ಮಂಡ್ಯದ ಸಕ್ಕರೆ ತಿಂದು ರಾಮನಗರದಲ್ಲಿ ರಾಮನ ದರ್ಶನ ಮಾಡಿ ಚಿತ್ರದುರ್ಗದ ಕೋಟೆ ನಾಡಿನಂಬ ಮನೆಯಲ್ಲಿ ಮಂಗಳೂರಿನ ಮೀನಿನ ಅಡುಗೆ ಮಾಡಿ ಕಾಯುತ್ತಿರುವಳು ನನ್ನ ಕನ್ನಡತಿ

----------------------------------

ನೋಂದಣಿ ಐಡಿ : KPFS2-6072

30
Votes
227
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top