ಮೌನದ ಕಾರ್ಮೋಡ
ರಚನೆ : ಸುಭಾಷ್ ಪಿಬಿ
----------------------------------
ಮೌನದ ಕಾರ್ಮೋಡದಲಿ ಅಡಗಿಸಿರುವೆ ಮಾತಿನ ಮಳೆಹನಿಯ ಆ ಮಾತಿನ ಮಳೆಹನಿಯಲಿ ಬೆರೆಸಿರುವೆ ನನ್ನೆದೆಯ ಸವಿದನಿಯ ಸವಿದನಿಯ ಸಿಹಿ ಮುತ್ತುಗಳ ಹೊತ್ತು ಮೋಡಗಳು ತೇಲಿ ಬರುತಿವೆ ನೋಡು ಸುರಿವ ಹನಿಯೆಲ್ಲವು ಹೇಳುತಿವೆ ನಿನ್ನ ಮೇಲೊಂದು ಇಂಪಾದ ಹಾಡು. ಹಾಡನು ಕೇಳಿ ಮೈಮರೆತು ನಿಂತ ನೀರಂತೆ ನಿಲ್ಲದಿರು ಅಣೆಕಟ್ಟು ಕಟ್ಟಿದರು ಹರಿವ ದಿಕ್ಕನ್ನೆ ಬದಲಿಸಿದರು ಮರಳಿ ನನ್ನೆಡೆಗೆ ಹರಿದು ಬಾ, ನದಿಯಂತೆ ನೀನು ನಿನಗಾಗಿ ಕಾದಿರುವೆ, ಕಡಲ ಅಲೆಯಂತೆ ನಾನು. ಅಲೆಗಳು ಅಲೆದಾಡುತಿವೆ, ನಿನ್ನ ಸುಳಿವಿಲ್ಲದೆ ಪರದಾಡುತಿವೆ ತಡವಾದರೂ ಆಗಲಿ, ನಿನ್ನೊಲವ ಅಮೃತವು, ಈ ಕಡಲ ಸೇರಲಿ.
----------------------------------
ನೋಂದಣಿ ಐಡಿ : KPFS2-6116