Submission 1513

ಒಂದು ವಿಭಿನ್ನ ನಿವೇದನೆ

ರಚನೆ : ಅಜಯ ಕುಮಾರ್ ಡಿ ಅಂಗಡಿ (ಅಜಯ್ ಅಂಗಡಿ)

----------------------------------

ಹೂವಿನ ಗಂಧವೇ ನಿನ್ನ ಪಯಣ ಎಲ್ಲಿಗೆ | ನಿನ್ನನು ಹುಡುಕುತ ಬಂದೆ ನಾನು ಇಲ್ಲಿಗೆ || ಈ ಮಳೆಯಲ್ಲೂ ನೀ ಹೊರಟರೆ ಈ ಥರ | ಖಂಡಿತ ಬರಬಹುದು ನಿನಗೆ ಶೀತಜ್ವರ || ತುಸು ಮಾತಾಡಬೇಕಿದೆ ಕೇಳುವೆಯಾ ನಿನ್ನೊಟ್ಟಿಗೆ | ನಮ್ಮೊಲವ ಮನೆಯ ಪಾಯಕೆ ನಾ ಇಡಲೆ ಮೊದಲ ಇಟ್ಟಿಗೆ || ಇರುವಂತಿದೆ ನಮ್ಮಿಬ್ಬರ ಆಲೋಚನೆ ಒಂದೆ | ಇರಬಾರದೇಕೆ ಒಟ್ಟೊಟ್ಟಿಗೆ ನಾವಿನ್ನು ಮುಂದೆ || ನೀ ಹೋದಲ್ಲೆಲ್ಲ ಹಾರಿ ಬರುವೆ ನಾನು | ನಿನ್ನ ಹೊರತು ಕಾಣೆನು ನಾ ಬೇರೆ ಕನಸನು || ಹೇಳಿಬಿಡು ನಿನ್ನ ಅಂತರಾಳದ ನುಡಿಯ | ಕೇಳಿ ಖುಷಿಪಡುವಂತೆ ನಿನಗಾಗಿ ಮಿಡಿವ ಹೃದಯ ||

----------------------------------

ನೋಂದಣಿ ಐಡಿ : KPFS2-6065

1
Votes
116
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top