ಕನ್ನಡ ನಾಡು ನುಡಿ
ರಚನೆ : ಸುರೇಶ ಎಮ್ ಎನ್
----------------------------------
ಕನ್ನಡ ಕಸ್ತೂರಿ ನಾಡು ಕಣಾ ಕನ್ನಡ ಶ್ರೀಗಂಧ ಬೀಡು ಕಣಾ ಪೇಳಲೈ ಬಾಳಲೈ ಕನ್ನಡ ತಾಯಿಯ ಹೃದಯ ಭಾಷಾ ಕಣಾ ಶರಣರು ದಾಸರು ರಾಜರು ಮಹಾರಾಜರು ಸಂತರು ಸಾಮಂತರು ಜ್ಞಾನ ವಿಜ್ಞಾನಗಳ ಸಾಮ್ರಾಜ್ಯದ ನೆಲೆಯು ಕನ್ನಡ ಕಣಾ ಕನ್ನಡ ಎನ್ನ ಹೃದಯ ದೇವಿ ಕಣಾ ಉತ್ತರದಿ ಗೋದಾವರಿ ದಕ್ಷಿಣದಿ ಕಾವೇರಿ ಕವಿ ಕೋಗಿಲೆ ಕೂಗಿದಂತ ವೈಭವದ ನೆಲೆಯೂ ಕಣಾ ಕನ್ನಡ ಕನ್ನಡ ಮಾತೆಯ ಕುವರರು ನಾವು ಕನ್ನಡ ಬಿಟ್ಟರೆ ಎಲ್ಲಿದೆ ಕುರುಹು ಬಿಟ್ಟಿರಲಾರೆವು ಭುವನೇಶ್ವರಿ ದೇವಿಯ ಅನುಕ್ಷಣ ಹೊಳೆವ ಮುಕುಟಮಣಿ ಕಾಂತಿಯ ಧನ್ಯತೆಯಿಂದ ನಮಿಸುವೆ ಕಣಾ ಕನ್ನಡಾಂಬೆಯ ಶ್ರೀ ಚರಣಕ್ಕೆ.
----------------------------------
ನೋಂದಣಿ ಐಡಿ : KPFS2-6047