Submission 1473

ಸಪ್ತ ದಶಕಗಳ ಕರುನಾಡು

ರಚನೆ : ಶಿವಯೋಗಿ ಎಂ ವಿ

----------------------------------

ಕರುನಾಡಿಗೆ ಎಪ್ಪತ್ತರ ಹರುಷ, ಭುವಿಯ ಮೇಲೆ ಪಸರಿಸಿದೆ ಉಷಾ. ಏಕೀಕರಣದ ಸಂಕಲ್ಪದಿ ಮೂಡಿ, ಸಪ್ತ ದಶಕದ ಹಬ್ಬವನು ಆಚರಿಸುವ ತವಕ. ​ಒಂದಾಗಿ ನಿಂತಿತು ಕನ್ನಡದ ಕಂಪು, ಕುವೆಂಪು, ಆಲೂರರ ಕನಸು ನನಸಾಗಿ. ನವೆಂಬರ್ ಒಂದರಂದು ಬೆಳಗಿತು ಸಿರಿನಾಡು ವಿಜಯವಾಗಿ. ಪಶ್ಚಿಮ ಘಟ್ಟದ ಹಸಿರ ಸಿರಿ, ಕಾವೇರಿ ಜಲಧಾರೆ. ​ಹಂಪೆಯ ಶಿಲ್ಪ, ಬಾದಾಮಿಯ ಕೆತ್ತನೆ, ಕಲೆಯ ಪರಂಪರೆ ಇಲ್ಲಿ ಎತ್ತರಕ್ಕೆ ಏರಿ ನಿಂತಿದೆ. ಮಾತೃಭಾಷೆಯ ಮಮತೆಯ ಗೂಡು, ಸಹಿಸು, ಸಹಬಾಳುವೆ ಇಲ್ಲಿಯ ನೀತಿ. ​ಎಪ್ಪತ್ತು ವರ್ಷಗಳ ಸಡಗರದ ಪಯಣ, ಸಿರಿಗನ್ನಡ ಸದಾ ಜಯದಿ ಮೆರೆಯಲಿ.

----------------------------------

ನೋಂದಣಿ ಐಡಿ : KPFS2-6035

1
Votes
106
Views
1 Year
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top