Submission 1471

ತುಂಬು ಬಸುರಿ

ರಚನೆ : ಜಗ್ಗಿ ಮುಡೇನಹಳ್ಳಿ

----------------------------------

ಊರಾಚೆಯ ಹೊಲಕ್ಕೆ ನುಗ್ಗಿ ಹಾಲು ತೆನೆಗಳನ್ನು ಅಗಿದು ಚಪ್ಪರಿಸಿ.. ಮೈ ಮೇಲೆ ಸಗಣಿಹಾಕಿ ಹೋಗುವ ಊರ ಗೌಡರ ಹೋರಿಗೆ.. ಪ್ರತಿನಿತ್ಯ ಊರ ಬೀದಿಯ ತುಂಬಾ ಪಾದ ಪೂಜೆ.. ಇದಕ್ಕೇ ಇರಬೇಕು ನನ್ನವ್ವ ತಾನು ಹರಕಲು ಜಾಗೀಟು ತೊಟ್ಟು... ನನಗೆ ಬಟ್ಟೆಯ ಮೇಲೆ ಬಟ್ಟೆಯ ಹೊದಿಸಿ ಜೋಪಾನ ಮಾಡಿದ್ದು ಜೀವ ಹಿಂಡುವ ಜಿಗಣೆಗಳ ಹಲ್ಲು ಇಳಿದರೂ ಕೆರೆಯುವಂತಿಲ್ಲ ರಕ್ತ ಚಿಮ್ಮಿದರೂ ಚೀರುವಂತಿಲ್ಲ ಕಲ್ಲಾಗಿಬಿಡಬೇಕು ಹೂವಿನಲ್ಲೂ, ವರ್ಣ, ವರ್ಗವೆಂಬ ಭೇದವೇಕೆ? ರಸ್ತೆ ಮೊಗ್ಗುಲ ಮೊಗ್ಗುಗಳ ಕಿತ್ತು ತುಳಿವ, ಕುಣಿವ, ಚಪಲವೇಕೆ? ಇಂತಹ ಬಿರುಗಾಳಿ, ಚಂಡಮಾರುತಗಳ ನಡುವೆ ಹಣತೆಗೆ ಬೆಳಕನ್ನು ಹಡೆಯುವ ಶಕ್ತಿ ಎಲ್ಲಿರುತ್ತದೆ. ಹೀಗೆ ಲೆಕ್ಕವಿಲ್ಲದಷ್ಟು ಬಾರಿ ಬಸಿರಾದ ನಾನು... ಗರ್ಭದ ತುಂಬಾ ಜೆಲ್ಲಿಕಲ್ಲುಗಳನ್ನು ತುಂಬಿಕೊಡು ಅತ್ತು, ಸತ್ತು, ನೋವುಗಳನ್ನು ಹಡೆಯದೇ ಅಂತರಂಗದಾ ತುಂಬಾ ಅದುಮಿಟ್ಟುಕೊಂಡ ತುಂಬು ಬಸುರಿ ನಾನು.

----------------------------------

ನೋಂದಣಿ ಐಡಿ : KPFS2-6034

11
Votes
257
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top