ಹೆಣ್ಣು
ರಚನೆ : ಶ್ವೇತ. ವಿ
----------------------------------
ಮನದ ಗೋಡೆಯಲ್ಲಿ ಎಷ್ಟೊಂದು ಬಿರುಕುಗಳು ಅಳಸಿದರು ಮಾಸದೆ ಮಡುಗಟ್ಟಿದ ಕಲೆಗಳು ಯಾರದ್ದೊ ಮೋಹ, ಮತ್ಯಾರಿಗೂ ತಾಪ ಬಿಸಿ ದಗೆಗೆ ಒಳಗೊಳಗೆ ಕಂದಿದೆಯಲ್ಲೇ.. ನುಣುಪಾದ ಪೋಷಾಕು, ಮಾಸದ ಮುಗುಳು ನಗೆ ನೋವಿನ ಗೆರೆಗಳಿಗೆ ಸೌಂದರ್ಯ ವರ್ಧಕಗಳು ಸೋಗು ತೊಟ್ಟಿರುವೆಯಲ್ಲೆ, ಎಲ್ಲಿಯೂ ನಿಲ್ಲದೆ ಯಾರಿಗೂ ಸಲ್ಲದೆ ಏಕೆ ಇಂತಹ ಧಾವಂತ ನೀ ಇಡುವ ಪ್ರತಿ ಹೆಜ್ಜೆಯಲ್ಲೂ ಮನಕೆ ಬಂದೆರಗುತಿದೆ ಕಣ್ಣೀರಿನ ಸೋನೆ ಮಳೆ. ನೀನಿರುವ ಹಾದಿ ಉದ್ದಕ್ಕೂ ರಣ ಹದ್ದುಗಳ ಕೇಕೆ, ಮಾಂಸ ಮಜ್ಜನವ ಅರಸುವವರ ಮಧ್ಯದಲ್ಲಿ ಬೆಚ್ಚಗಿನ ಪ್ರೀತಿ ಏಕೆ ಹುಡುಕುವೆ ಮರುಳೆ? ಮನದ ಗೋಡೆಗೆ ಇನ್ನಾದರೂ ಬೀಗ ಜಡಿಯೇ ಅಪ್ಪಿತಪ್ಪಿಯು ಕಿಟಕಿಯನ್ನು ತೆರೆಯದಿರು ಬದುಕ ಚಕ್ಕಡಿಗೆ ಸಿಕ್ಕಿ ಸವೆಸಿರುವ ಬಟ್ಟೆಯ ಬದಲಿಸು ಓ ಹೆಣ್ಣೀ. ...
----------------------------------
ನೋಂದಣಿ ಐಡಿ : KPFS2-6010