ಬೆಳಕು ಚೆಲ್ಲಿ
ರಚನೆ : ಪ್ರವೀಣ ಚ. ಪಂಡಿತ
----------------------------------
ಕಾಮವನ್ನು ಪರಿತಪಿಸುವರಿಗೆ ಪರಿಪಕ್ವ ಪ್ರೇಮದ ಬೆಳಕು ಚೆಲ್ಲಿ ಕ್ರೋಧದ ಜ್ವಾಲೆಯಲ್ಲಿ ಮಿಂದು ಹೋದವರಿಗೆ ಶಾಂತಿ ಮಂತ್ರದ ಬೆಳಕು ಚೆಲ್ಲಿ. ಅತಿಯಾದ ಲೋಭ ಇದ್ದವರಲ್ಲಿ ಉದಾರ ವ್ಯಕ್ತಿತ್ವದ ಬೆಳಕು ಚೆಲ್ಲಿ. ಲಲನೆಯರ ಮೋಹದಲ್ಲಿ ಮುಳಗಿದವರಿಗೆ ನಾರಿಯ ಪಂಚರೂಪಗಳ ಪ್ರಾಮುಖ್ಯತೆಯ ಬೆಳಕು ಚೆಲ್ಲಿ. ನಾನು ನನ್ನದು ಎಂಬ ಮದವನ್ನು ಬಿಟ್ಟು ನಾವು ಎನ್ನುವ ಸುಂದರ ಬದುಕಿನ ಅಲಂಕಾರದ ಬೆಳಕು ಚೆಲ್ಲಿ. ಬೇರೆಯವರು ಬೆಳೆಯವದನ್ನು ನೋಡಿ ಮಾತ್ಸರ್ಯ ಪಡುವವರು ತಮ್ಮ ಅಂತರಂಗದ ಶುದ್ದಿಯ ಬೆಳಕು ಚೆಲ್ಲಿ. ಈ ಅರಿಷಡ್ವರ್ಗಗಳನ್ನು ಇಟ್ಟುಕೊ ನಿನ್ನ ಹತೋಟಿಯಲ್ಲಿ ನೀನು ಏನೆಂಬುವ ಈ ಬದುಕಿನ ಹುಡುಕಾಟದಲ್ಲಿ ನಿನ್ನ ಅಂತರಂಗದ ಬದಲಾವಣೆಯತ್ತ ಬೆಳಕು ಚೆಲ್ಲಿ. ಸಾರ್ಥಕತೆಯ ಬದುಕಿನತ್ತ ನಿನ್ನ ಈ ಪಯಣದಲ್ಲಿ ಅರಿವಿನ ಜ್ಯೋತಿಯನು ಚೆಲ್ಲುತ ಈ ಶುಭ ಘಳಿಗೆಯಲ್ಲಿ ಪ್ರೀತಿಯ ಹಣತೆಯಿಂದ ಸಾಮರಸ್ಯದ ಬೆಳಕು ಚೆಲ್ಲಿ ಬೆಳಗು ಬಾ ಈ ಬಾಳನ್ನು ಸಂತೋಷದ ಬೆಳಕು ಚೆಲ್ಲಿ
----------------------------------
ನೋಂದಣಿ ಐಡಿ : KPFS2-6009