Submission 7438

ಐಕ್ಯತೆ

ರಚನೆ : ವಿಶ್ವಚೇತನಗೌಡ ಆರ್ ಪಾಟೀಲ್

----------------------------------

ನೂರೊಂದು ಮತಗಳಲಿ ಏಕತೆಯ ಪಥ ಒಂದೇ ರಹದಾರಿಯಾಗಬೇಕಿದೆ ಭಾವನೆಗಳೊಡನೆ ಚೆಲ್ಲಾಟವೇತಕೆ ಒಡೆದ ಮನಸ್ಸುಗಳು ಒಂದುಗೂಡಬೇಕಿದೆ ಕಟ್ಟಡದ ಒಳಗೆ ಇಟ್ಟಿರುವ ದೈವದ ಲೆಕ್ಕ ಇಡುವ ಗೋಜು ನಮಗೇತಕೆ? ಒಳಗಿನಾ ದ್ವೇಷವದು ಅನುರಾಗವಾಗಲು ಸುತ್ತು ಕೋಟೆಯ ಕಟ್ಟಿ ನಿಲ್ಲಲೇಕೆ? ಸುರಿವ ಮಳೆಯದು ತಾನು ಧರೆಗೆ ನದಿಯಾಗಿ ಓಡೋಡಿ ಕಡಲ ತಬ್ಬುವ ತವಕವು ಪ್ರಕೃತಿಯೊಡನೆ ನಾವು ಹಾಗೆ ಬದುಕುವುದು ಕಲಿತು ಮುನ್ನುಗ್ಗಲು ಯಾಕೆ ತಡವು? ಹಚ್ಚಿಟ್ಟ ಹಣತೆಯು ಎಲ್ಲರೆದೆಯಲಿ ಕುಳಿತು ಸದಾಕಾಲ ಐಕ್ಯತೆಯ ಬೆಳಕು ಬೆಳಗಬೇಕು

----------------------------------

ನೋಂದಣಿ ಐಡಿ : KPFS2-2388

0
Votes
116
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top