Submission 7430

ಬೇಸಿಗೆ ರಜಾ ದಿನ

ರಚನೆ : ಕೆ.ಉಷಾಮುರಳಿಧರ್

----------------------------------

ರಜೆಯು ಸಜೆಯಾಗದಿರಲಿ ಮಗುವೇ ಸ್ಫೂರ್ತಿಯ ಸೆಲೆಯಾಗಲಿ ಆ ದಿನಗಳು... ಆ ಕ್ಷಣಗಳು... ॥ಪ॥ ಗಾಜಿನ ಪರದೆಯ ಸೆಳೆತಕೆ ಸೆರೆಯಾಗದೆ ಗೃಹದ ಪರಿಧಿಯ ಒಳಗೆ ಬಂಧಿಯಾಗದೆ ಚೇತೋಹಾರಿಯಾಗಿರು ಸದಾ ಎಳೆ ಮನವೇ ॥೧॥ ಕಳೆದು ಹೋಗದಿರಲಿ ಮೆದು ಮನವು ಮೆಲುಕು ಹಾಕುವಂತಿರಲಿ ಅನುದಿನವೂ ಪುಟಿದೇಳುತ ಜಡತೆಯ ನೀಗುವಂತಿರಲಿ ಎಳೆಯ ನೆನಪು ॥೨॥ ಗುಂಪೊಂದರಲಿ ಬೆರೆಯುತ ಬೆಸೆಯಲು ಚಿತ್ತವು ಹೊರಾಂಗಣದತ್ತ ಚಲಿಸಲು ಉತ್ತಮವದು ವಿಶಾಲ ಬಯಲಿನೊಳು ಹೆಜ್ಜೆಯ ಊರಲು ॥೩॥ ಹಕ್ಕಿಗಳ ಹಾರಾಟದ ಚಿಲಿಪಿಲಿ ನಾದವು ಹಿತವ ನೀಡಲಿ ಕಣ್ನೋಟಕೆ ಕಿವಿಯಾಲಿಕೆಗೆ ನಿಸರ್ಗದೊಳು ಒಂದಾಗುತ ನಡೆ ನೀ ಬೆಳಕ ಹಾದಿಯೊಳು ॥೪॥

----------------------------------

ನೋಂದಣಿ ಐಡಿ : KPFS2-2382

0
Votes
117
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top